ಬೆಳಗಾವಿ: ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇರುವ ಅಂಡರ್ ಪಾಸ್ ನಲ್ಲಿ ಬೈಲಹೊಂಗಲ ಮೂಲದ ವ್ಯಕ್ತಿ ಬಿದ್ದು ಗಂಭೀರ ಗಾಯಗೊಂಡಿದ್ದಾನೆ . ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇರುವ ಅಂಡರ್ ಪಾಸ್ ನಲ್ಲಿ ಇಂದು ಬೈಲಹೊಂಗಲದ ವ್ಯಕ್ತಿ ಬಿದ್ದಿದ್ದು, ಆತನಿಗೆ ಗಂಭೀರ ಗಾಯವಾಗಿದ್ದೆ. ತಕ್ಷಣ ವ್ಯಕ್ತಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಳಗಾವಿಯ ಜಿಲ್ಲಾಧಿಕಾರಿ ಹಾಗೂ ಕೋರ್ಟ್ ನಡುವೆ ಸಂಪರ್ಕ ಸಾಧಿಸುವ ಅಂಡರ್ ಪಾಸ್ ಇದಾಗಿದ್ದು, ಅಪರಿಚಿತ ವ್ಯಕ್ತಿ ರಸ್ತೆ ಮೇಲಿಂದ ಆಯಾ ತಪ್ಪಿ ಬಿದ್ದಿದ್ದಾನೆ. ವ್ಯಕ್ತಿ ಬಿಳುತ್ತಲೆ ರಕ್ತದ ಮಡುವಿನಲ್ಲಿ ನರಳುತ್ತಿದ ಆತನನ್ನು ಪೊಲೀಸರು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ