ಚಿಕ್ಕೋಡಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಗುಂಗಲ್ಲಿ ಬಡಜನರ ಹಿತಾಸಕ್ತಿ ಮರೆತು ಬರೀ ಭಾಷಣಕ್ಕೆ ಮಾತ್ರ ಸಿಮಿತವಾಗಿದೆ.ಗೃಹಲಕ್ಷ್ಮಿ ಯೋಜನೆಯ ಉಪಯೋಗ ನಿಜವಾದ ಬಡಜನರಿಗೆ ಮುಟ್ಟಲು ಕೆಲ ರಾಜಕೀಯ ಮುಖಂಡರ ಕೈಗೊಂಬೆಯಂತೆ ವರ್ತಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ತವರು ಕ್ಷೇತ್ರದಲ್ಲಿ ಹಿರಿಯ ಮಹಿಳೆಯೊಬ್ಬರು ಬಿಕ್ಕಿ ಬಿಕ್ಕಿ ಅತ್ತ ವೀಡಿಯೊ ಈಗ ಎಲ್ಲೆಡೆ ವೈರಲ್ ಆಗಿದ್ದು, ಶಾಸಕ ತಮ್ಮನ್ನವರ ವಿರುದ್ದ ನೆಟ್ಟಿಗರು ಕಿಡಿ ಕಾರಿದ್ದಾರೆ.
ರಾಯಬಾಗ ತಾಲೂಕಿನ ಹಾರೋಗೇರಿ ಪಟ್ಟಣದ ಸದಾಶಿವ ನಗರದ ನಿವಾಸಿ ಕಲ್ಲವ್ವ ಗಾಣಿಗೇರ (68), ತಾಯ್ಯಪ್ಪ ಗಾಣಿಗೇರ(79) ದಂಪತಿಗೆ ಪಡಿತರ ಚೀಟಿ ಹಾಗೂ ಯಾವುದೇ ಪಿಂಚಣಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿಲ್ಲ. ಮಕ್ಕಳಿದ್ದರೂ ದೂರವೇ ಉಳಿದ ಈ ಹಿರಿಯ ಜೀವಗಳಿಗೆ ಅಧಿಕಾರಿಗಳು ಯಾವುದೇ ಸೌಲಭ್ಯ ಒದಗಿಸಿಲ್ಲ ಅನ್ನೋದು ನಿಜಕ್ಕೂ ದುರಂತ.