animals

ಮಂಗಗಳ ಕಾಟಕ್ಕೆ ಬೇಸತ್ತ ಗ್ರಾಮಸ್ಥರು.

Share

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು ಸುಮಾರು 6 ಜನರಿಗೆ ಕಚ್ಚಿ ಗಾಯಗಳನ್ನ ಮಾಡಿದ್ದು ಜನರು ಗ್ರಾಮದಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ.

ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು ಸುಮಾರು 6 ಜನರಿಗೆ ಕಚ್ಚಿ ಗಾಯಗಳನ್ನ ಮಾಡಿದ್ದು ಜನರು ಗ್ರಾಮದಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ. ಮಂಗಗಳ ಕಾಟಕ್ಕೆ ಗ್ರಾಮಸ್ಥರು ಬೇಸತ್ತು ಸುಸ್ತಾಗಿದ್ದಾರೆ.

ಕಳೆದು ಎರಡು ದಿನಗಳಿಂದ ಮಂಗಗಳ ಉಪಟಳ ಹೆಚ್ಚಾಗಿದ್ದು ಗ್ರಾಮದಲ್ಲಿ ಭಯದ ವಾತಾವರಣ ಮಾಡಿಸಿದೆ ಆದಷ್ಟು ಬೇಗ ಮಂಗಗಳನ್ನು ಸೆರೆ ಹಿಡಿದ ಸುರಕ್ಷಿತ ಸ್ಥಳಗಳಿಗೆ ಬಿಡಿ ಎಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ .

Tags:

error: Content is protected !!