Belagavi

ಸಂತೋಷ ಧರೇಕರ ಸಾಮಾಜಿಕ ಕಾರ್ಯವನ್ನು ಪ್ರಶಂಸಿಸಿದ ಬೆಳಗಾವಿ ಜಿಲ್ಲಾಡಳಿತ

Share

ಬೆಳಗಾವಿಯ ಸಮಾಜ ಸೇವಕ ಸಂತೋಷ ಧರೇಕರ ಅವರ ಸಾಮಾಜೀಕ ಕಾರ್ಯವನ್ನು ಮೆಚ್ಚಿ ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ಪ್ರಶಂಸಾಪತ್ರವನ್ನು ವಿತರಿಸಿ ಪ್ರೋತ್ಸಾಹಿಸಲಾಗಿದೆ.

ಬೆಳಗಾವಿಯ ಸಮಾಜ ಸೇವಕ ಸಂತೋಷ ಧರೇಕರ ಅವರು ಸಮಾಜ ಸೇವೆಯೊಂದಿಗೆ ಆರ್ಥಿಕ ಮತ್ತು ಶೈಕ್ಷಣಿಕ ನೆರವು ನೀಡಿ ಮಕ್ಕಳ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡುತ್ತಿದ್ದಾರೆ. ಅಲ್ಲದೇ ಬೆಳಗಾವಿ ನಗರದ ಸಾರ್ವಜನಿಕ ವಲಯದಲ್ಲಿನ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಅವರು ಜಿಲ್ಲಾಡಳಿತದ ಗಮನ ಸೆಳೆಯುತ್ತಿದ್ದಾರೆ. 2024ರ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು

ಸುಗಮ ಮತ್ತು ಶಾಂತಿಯುತವಾಗಿ ನಡೆಸಲು ನಾಗರಿಕ ಸಮಾಜದ ಸದಸ್ಯರೊಂದಿಗೆ ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡಿದ್ದಕ್ಕೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಮೊಹ್ಮದ ರೋಷನ್ ಅವರು ಸಂತೋಷ ಧರೇಕರ ಅವರಿಗೆ ಪ್ರಶಂಸಾ ಪತ್ರವನ್ನು ವಿತರಿಸಿದ್ದಾರೆ.

Tags:

error: Content is protected !!