ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಿಕ್ಷರೊಬ್ಬರು ಡಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದು ಶಿಕ್ಷಕನ ಡಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಶಿಕ್ಷಣ ಇಲಾಖೆಯ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನ ಏರ್ಪಡಿಸಲಾಗಿತ್ತು ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗಿಯಾಗಿದ್ದರು. ಕೊನೆಯಲ್ಲಿ ಶಿಕ್ಷಕ ಪರಶುರಾಮ ಸರಸ್ವತಿ ಭರತ ನಾಟ್ಯದ ಹಾಡಿಗೆ ಡಾನ್ಸ್ ಮಾಡಿ ಮಕ್ಕಳನ್ನ ರಂಜಿಸಿದ್ದರು. ಸದ್ಯ ಶಿಕ್ಷಕ ಪರಶುರಾಮ ಮಾಡಿರುವ ಡಾನ್ಸ್ ವೈರಲ್ ಆಗಿದೆ.