Dharwad

ಅವಳಿ ನಗರದಲ್ಲಿ ಹೆಚ್ಚಿದ ವಿದ್ಯಾರ್ಥಿಗಳ ಆತ್ಮಹತ್ಯೆ; ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡಿಸಲು ಕಮಿಷನರ್ ಎನ್ ಶಶಿಕುಮಾರ್ ಹೊಸ ಪ್ಲ್ಯಾನ್

Share

ಮಕ್ಕಳು ಅಂದ್ರೆ ಸಾಕು ಯಾವ ತಂದೆ ತಾಯಿಗಳಿಗೆ ಪ್ರೀತಿಯ ಕನಸು ನಮ್ಮ ಮುದ್ದಿನ ಮಕ್ಕಳು ಚೆನ್ನಾಗಿ ಕಲಿಬೇಕು ಮುಂದೆ ಬರಬೇಕು ಸಮಾಜದಲ್ಲಿ ನಮ್ಮ ಹೆಸರನ್ನು ಉಳಿಸುವ ಕಾರ್ಯವನ್ನು ಮಾಡಬೇಕು ಅಂತಾ ಕನಸನ್ನು ಕಂಡಿರ್ತಾರೆ,ಅದೇ ರೀತಿ ಹಗಲು ರಾತ್ರಿ ಕಷ್ಟಪಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರೆ.ಆದ್ರೆ ಈಗಿನ ಕಾಲದ ಮಕ್ಕಳು ಮಾತ್ರ ಪೋಷಕರ ಕಷ್ಟವನ್ನು ಅರಿಯದೆ ಮಾಡಬಾರದನ್ನು ಮಾಡಲು ಹೋಗಿ ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುವ ಹಂತದ ಮನಸ್ಥಿತಿಯತ್ತ ಮುಖ ಮಾಡಿದ್ದಾರೆ.ಹೀಗಾಗಿ ಸಹಜವಾಗಿ ಇದೀಗ ಪೋಷಕರಿಗೆ ಆತಂಕ ಶುರುವಾಗಿದೆ ಹಾಗಾದ್ರೆ ಆ ಆತಂಕಕ್ಕೆ ಕಾರಣ ಮತ್ತು ಪರಿಹಾರ ಏನು ಅಂತೀರಾ…ತೋರಿಸ್ತೀವಿ ನೋಡಿ.

ಕಳೆದ ಒಂದೂವರೆ ತಿಂಗಳಿನಿಂದ ಹುಬ್ಬಳ್ಳಿಯಲ್ಲಿ ಬರೋಬ್ಬರಿ ನಾಲ್ಕು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಸಹಜವಾಗಿ ಅವಳಿ ನಗರದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.ಶಿರಡಿ ನಗರದಲ್ಲಿ ಒನ್ಲೈನ್ ಗೇಮ್ ಚಟಕ್ಕೆ ವಿದ್ಯಾರ್ಥಿ ನೇಣಿಗೆ ಶರಣಾದ್ರೆ,ಮೊಬೈಲ್ ಹಿಡಿಬೇಡ ಎಂದಿದ್ದಕೆ ಬೈರಿದೇವರಕೊಪ್ಪದಲ್ಲಿ 13 ವರ್ಷದ ಬಾಲಕ ನೇಣು ಬಿಗಿದುಕೊಂಡಿದ್ದ.ಇವೆರಡು ಘಟನೆ ಮಾಸುವ ಮುನ್ನವೇ ನಗಶೆಟ್ಟಿಕೊಪ್ಪದಲ್ಲಿ ಕಾಲೇಜು ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲ್ ಆದೇ ಎಂಬ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು.ಇದೀಗ ಅವಳಿ ನಗರದ ಪೋಷಕರನ್ನು ಟೆನ್ಷನ್’ಗೆ ನೂಕಿದೆ ಹೀಗಾಗಿ ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡಿಸಲು ಕಮಿಷನರ್ ಎನ್ ಶಶಿಕುಮಾರ್ ಮುಂದಾಗಿದ್ದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದ್ದಾರೆ.

ವಿದ್ಯಾರ್ಥಿಗಳು ಸೂಸೈಡ್ ಮಾಡಿಕೊಳ್ಳುತ್ತಿರೋ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕಮಿಷನರ್ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ವಿದ್ಯಾರ್ಥಿಗಳಿಗೆ ಜಾಗ್ರತಿ ಮೂಡಿಸುವ ವಿಶೇಷ ಕಾರ್ಯಾಗಾರವನ್ನು ಮಾಡುವುದರ ಕುರಿತು ಆದಷ್ಟು ಬೇಗ ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸುತ್ತೇನೆ.ಇದರ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರತಿಯೊಬ್ಬರು ತಮ್ಮ ತಂದೆ ತಾಯಿಗಳಿಗೆ ಮಾಡುವ ಮಹಾ ಮೋಸ ಅಂತಾ ಶಶಿಕುಮಾರ್ ಹೇಳಿದ್ದು ಹೀಗೆ.

ಸದ್ಯ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆಯಂತಹ ಹೇಯ ಕೃತ್ಯದ ಜಾಗ್ರತಿ ಮೂಡಿಸಿ ಅವರನ್ನು ಪಾಸಿಟಿವ್ ಕಡೆ ತರುವ ಪ್ರಯತ್ನಕ್ಕೆ ಅವಳಿ ನಗರದ ಕಮಿಷನರೇಟ್’ನ ಪೊಲೀಸರು ಮುಂದಾಗಿದ್ದಾರೆ ಅಷ್ಟೇ ಅಲ್ಲದೆ ಈ ಕಾರ್ಯಕ್ಕೆ ಪೋಷಕರು ಕೂಡಾ ಪೊಲೀಸ್ ಇಲಾಖೆಯ ಜೊತೆ ಕೈ ಗೂಡಿಸುವ ಜೊತೆಗೆ ಸಹಕಾರ ನೀಡುವ ಕೆಲಸಕ್ಕೆ ಮುಂದಾಗಬೇಕಿದೆ.

Tags:

error: Content is protected !!