Belagavi

56ನೇ ಫಾದರ್ ಎಡ್ಡಿ ಟೂರ್ನಾಮೆಂಟನ್ನು ಗೆದ್ದು ಬೀಗಿದ ಸೇಂಟ್ ಪಾಲ್ಸ್ ತಂಡ

Share

 

ಫಾದರ್ ಎಡ್ಡಿ ಅವರ 56ನೇ ಸ್ಮರಣಾರ್ಥ ಪೋಲೈಟ್ಸ್ ಆಫ್ ಬೆಲಗಾಮ್ ವಲ್ಡ್ ವೈಡ್ ಮತ್ತು ಬಿಗ್ ವೆಂಚರ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಅಂತರ ವಿದ್ಯಾಲಯ ಫೂಟಬಾಲ್ ಸ್ಪರ್ಧೆಯನ್ನು ಸೇಂಟ್ ಪಾಲ್ಸ್ ತಂಡವು ಗೆದ್ದು ಬೀಗಿದೆ.

ಬೆಳಗಾವಿಯಲ್ಲಿ ಪೋಲೈಟ್ಸ್ ಆಫ್ ಬೆಲಗಾಮನ ವತಿಯಿಂದ ಪ್ರತಿವರ್ಷ ಫಾದರ್ ಎಡ್ಡಿ ಅವರ ಸ್ಮರಣಾರ್ಥ ಅಂತರ ವಿದ್ಯಾಲಯ ಫೂಟಬಾಲ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ಬಾರಿ ಪೋಲೈಟ್ಸ್ ಆಫ್ ಬೆಲಗಾಮ ವಲ್ಡ್ ವೈಡ್ ಮತ್ತು ಬಿಗ್ ವೆಂಚರ್ಸ್ ಸಹಭಾಗಿತ್ವದಲ್ಲಿ ನಡೆದ ಟೂರ್ನಾಮೆಂಟಿನಲ್ಲಿ ಎಂ.ವ್ಹಿ. ಹೇರವಾಡಕರ ಮತ್ತು ಸೇಂಟ್ ಪಾಲ್ಸ್ ನಡುವೆ ಅಂತಿಮ ಹಣಾಹಣಿ ನಡೆಯಿತು. 4-0 ಗೋಲಗಳನ್ನು ಗಳಿಸುವ ಮೂಲಕ ಸೇಂಟ್ ಪಾಲ್ಸ್ ತಂಡವು ಎಂ.ವ್ಹಿ. ಹೇರವಾಡಕರ ತಂಡವನ್ನು ಸೋಲಿಸಿ ವಿಜಯದ ಪತಾಕೆಯನ್ನು ಹಾರಿಸಿತು.

ಉತ್ತರ ಶಾಸಕ ಆಸೀಫ್ ಸೇಠ್, ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟೀನ್ ಮಾರ್ಬಾನಿಯಾಂಗ್, ಮಹಾನಗರ ಪಾಲಿಕೆ ಅಭಿಯಂತರರಾದ ಲಕ್ಷ್ಮೀ ನಿಪ್ಪಾಣಿಕರ, ಮೆಟ್ರೋ ಕಾಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡನ ಸಂಚಾಲಕರಾದ ನಾಗೇಶ ಛಾಬ್ರಿಯಾ, ಪೋಲೈಟ್ಸ್ ಆಫ್ ಬೆಲಗಾಮ ವಲ್ಡ್ ವೈಡನ ಅಧ್ಯಕ್ಷ ಡಾ. ಮಾಧವ ಪ್ರಭು ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ಮತ್ತು ಉತ್ತಮ ಪ್ರದರ್ಶನ ನೀಡದ ಕ್ರೀಡಾಳುಗಳಿಗೆ ಪಾರಿತೋಷಕ ಮತ್ತು ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.

ಉತ್ತರ ಶಾಸಕ ಆಸೀಫ್ ಸೇಠ್ ಅವರು ಗೆದ್ದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮಕ್ಕಳಲ್ಲಿನ ಕ್ರೀಡಾಸಕ್ತಿಗೆ ಪ್ರೋತ್ಸಾಹವನ್ನು ನೀಡಲು ಪೋಲೈಟ್ಸನ ವತಿಯಿಂದ ಸ್ಪರ್ಧೆಗಳನ್ನು ಆಯೋಜಿಸಿದ್ದಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ನಾಗೇಶ ಛಾಬ್ರಿಯಾ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಇರಬೇಕು ಎಂದರು. ಮಕ್ಕಳ ಕ್ರೀಡಾಸಕ್ತಿಗೆ ಪ್ರೋತ್ಸಾಹಿಸಲು ತಮಗೊಂದು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಇನ್ನು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟೀನ್ ಮಾರ್ಬಾನಿಯಾಂಗ್ ಅವರು ವಿಜೇತ ಮತ್ತು ಉಪವಿಜೇತ ತಂಡಗಳಿಗೆ ಅಭಿನಂದನೆಗಳನ್ನು ತಿಳಿಸಿ, ಬೆಳಗಾವಿಗರು ಕ್ರೀಡೆಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಮಕ್ಕಳು ಸೋಲು-ಗೆಲುವಿಗೆ ತಲೆ ಕೆಡಿಸಿಕೊಳ್ಳದೇ ಗುರಿ ಮುಟ್ಟುವ ತನಕ ತಮ್ಮ ಪ್ರಯತ್ನವನ್ನು ಬಿಡಬಾರದು ಎಂದು ಕರೆ ನೀಡಿದರು.
ಮೂರನೇ ಬಾರಿ ಸತತವಾಗಿ ಸೇಂಟ್ ಪಾಲ್ಸ್ ತಂಡ ಫಾದರ್ ಎಡ್ಡಿ ಟೂರ್ನಾಮೆಂಟನ್ನು ಗೆದ್ದಿರುವುದಾಗಿಪ್ರಾಚಾರ್ಯರಾದ ಫಾದರ್ ಸೈಮನ್ ಫರ್ನಾಂಡೀಸ್,ಅವರು ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಹೇರವಾಡಕರ ತಂಡದ ಉತ್ತಮ ಪ್ರದರ್ಶನವನ್ನು ಕೊಂಡಾಡಿದರು.

ಗೆದ್ದ ತಂಡದವರು ವಿಜಯೋತ್ಸವವನ್ನು ಆಚರಿಸಿ ಸಂಭ್ರಮಿಸಿದರು.

ಕಳೆದ 10 ದಿನಗಳಿಂದ ನಡೆಯುತ್ತಿರುವ ಸ್ಪರ್ಧೆಯಲ್ಲಿ ಸುಮಾರು 26 ವಿವಿಧ ಶಾಲೆಗಳ ತಂಡಗಳು ಭಾಗಿಯಾಗಿದ್ಧವು.

Tags:

error: Content is protected !!