ಸವದತ್ತಿ ತಾಲೂಕಿನಾದ್ಯಂತ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಗೋಡೆ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಾಮಾಪುರದಲ್ಲಿ ನಡೆದಿದೆ.
ಸವದತ್ತಿ ಪಟ್ಟಣದ ರಾಮಾಪುರದಲ್ಲಿ ಯಮನೂರ ಎಂಬವರಿಗೆ ಸೇರಿದ ಮನೆಗೋಡೆ ನಿರಂತರ ಮಳೆ ಸುರಿಯುತ್ತಿರುವ ಕಾರಣ ಕುಸಿದು ಬಿದ್ದಿದೆ. ಈ ಪರಿಣಾಮ ಮನೆಯಲ್ಲಿದ್ದ ಯಲ್ಲವ್ವ ಯಮನೂರ(60) ಗಂಭೀರ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ಮಹಿಳೆಯನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಯ ಕಿಮ್ಸ್ಗೆ ಕರೆದೊಯ್ಯುಲಾಗಿದೆ.
ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
ಗಂಭೀರ ಗಾಯಗೊಂಡ ಯಲ್ಲವ್ವ ಪತಿ ಮಾತನಾಡಿ ನಿನ್ನೆ ರಾತ್ರಿ 11.00 ಗಂಟೆಗೆ ಮಲಗಿದ ವೇಳೆ ಮನೆಗೋಡೆ ಕುಸಿದು ಅನಾಹುತ ಸಂಭವಿಸಿದೆ ಎಂದು ಹೇಳಿದ್ದರು .