ಸದಾ ನೈತಿಕತೆ ಪಾಠ ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ನೈತಿಕತೆ ಪ್ರದರ್ಶಿಸಲಿ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ನ್ಯಾಯಾಲಯ ಆದೇಶಿಸಿದೆ. ಇನ್ನಾದರೂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ
ಶಿವಮೊಗ್ಗ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮುಡ ಹಗರಣದಲ್ಲಿ ಆರೋಪಿ ಆಗಿರುವಂಥದ್ದು ಸಿದ್ದರಾಮಯ್ಯ ಮೇಲೆ ತನಿಖೆಗೆ ರಾಜಪಾಲರು ಆದೇಶ ನೀಡಿರುವುದು ಸರಿಯೆಂದು ಹೈಕೋರ್ಟಿ ಎತ್ತಿ ಹಿಡಿದಿದೆ , ಬಿಜೆಪಿಯವರು ಹೇಳಿ ಮಾಡಿದ್ದು ಅಲ್ಲ ಮೊನ್ನೆ ಜನಪ್ರತಿನಿಧಿಗಳ ಕೋರ್ಟ್ ಕೂಡ ಎತ್ತಿ ಹಿಡಿದಿದೆ ಯಾವ್ಯಾವ ಸೆಕ್ಷನ್ ನಲ್ಲಿ ಕೇಸ್ ಅನ್ನ ರಿಜಿಸ್ಟರ್ ಮಾಡಬೇಕು ಎಂಬುದನ್ನು ಕೂಡ ಕೋರ್ಟ್ ಹೇಳಿದೆ ದೆಹಲಿಯಿಂದ ಸ್ಪೆಷಲ್ ವಿಮಾನದಲ್ಲಿ ಅಡ್ವಕೇಟ್ ಅನ್ನ ಕರೆಸಿ ಕೋರ್ಟ್ನಲ್ಲಿ ಇವರು ವಾದ ಮಂಡಿಸಿದ್ದಾರೆ , ಎಲ್ಲಾ ರೀತಿಯ ವಾದ ವಿವಾದಗಳನ್ನು ನಂತರವೂ ಕೋರ್ಟ್ ಈ ರೀತಿ ಆದೇಶ ನೀಡಿದೆ ಎಂದು ವಾಗ್ದಾಳಿ ನಡೆಸಿದರು .
ನಿನ್ನೆ ಕ್ಯಾಬಿನೆಟ್ ನಲ್ಲಿ ಸಿಬಿಐ ಬರಬಾರದು ಎಂದು ಬೇಲಿ ಕಟ್ಟಿಕೊಂಡಿದ್ದಾರೆ ತನಿಖೆಯನ್ನ ಎದುರಿಸುತ್ತೇನೆ ಎಂದು ಹೇಳುವವರು ಸಿಬಿಐಗೆ ಭಯಪಡುತ್ತಿರುವುದು ಯಾಕೆ ಯಾವುದೇ ತನಿಖೆಯನ್ನು ಎದುರಿಸುತ್ತೇನೆ ಎಂದು ತಾಕತ್ತು ತೋರಿಸುತ್ತಿರುವ ಅವರಿಗೆ ಭಯ ಯಾಕೆ ರಾಜ್ಯಪಾಲರು ಯಾವುದೇ ರೀತಿ ಲೆಟರ್ ಅನ್ನ ಬರೆದರು ಅದನ್ನು ಸೆಕ್ರೆಟ್ರಿಯವರು ನೇರವಾಗಿ ಉತ್ತರ ನೀಡುವಂತಿಲ್ಲ ಅದನ್ನು ಮಂತ್ರಿಗಳಿಗೆ ಎಂದು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿಕೊಂಡಿದ್ದಾರೆ ಒಬ್ಬ ಕೊಲೆ ಅಥವಾ ಕಲ್ಪನಾ ಮಾಡಿದ ವ್ಯಕ್ತಿ ನಾನು ಯಾವುದೇ ತನಿಖೆಗೂ ಸಿದ್ದ ಎಂದು ಹೇಳುತ್ತಾನೆ ಆದರೆ ಮನೆ ಮುಂದೆ ಬೇಲಿ ಹಾಕಿಕೊಂಡು ಕುಳಿತಂತಾಗಿದೆ ಇದರ ಅರ್ಥವೇನು ಜನರಿಗೆ ಆದರ್ಶವಾಗಿ ಇರಬೇಕಾದ ಮುಖ್ಯಮಂತ್ರಿ ಈ ರೀತಿ ಮಾಡಿದರೆ ಇದರ ಅರ್ಥವೇನು ಮೌಲ್ಯಗಳಿಗೆ ನೈತಿಕತೆ ಇದೆ ಅವನ್ನೆಲವನ್ನು ಎತ್ತಿ ಹಿಡಿಯಬೇಕಿತ್ತು 50 ವರ್ಷಗಳಿಂದ ನನ್ನ ಮೈಯ ಮೇಲೆ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಹೇಳಿಕೊಂಡವರು ಇಂದು ಬಟ್ಟೆ ತುಂಬಾ ಬಣ್ಣ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು .
ಲೋಕಾಯುಕ್ತವನ್ನು ಕತ್ತು ಹಿಸುಕಿ ಸಾಯಿಸಿ ಸಿಸಿಬಿ ಮಾಡಿದ್ದರು ಆಮೇಲೆ ಕೋರ್ಟ್ ಆದೇಶ ಕೊಟ್ಟ ನಂತರ ಮತ್ತೆ ಲೋಕಾಯುಕ್ತ ಮಾಡಿದರು , ಮೊದಲಿಂದಲೂ ಕೂಡ ಇವರು ಮಾಡಿರುವ ಅಪರಾಧವನ್ನು ಯಾರು ತನಿಖೆ ಮಾಡಬಾರದು ಎಂದು ಈ ರೀತಿ ಮಾಡಿಕೊಂಡು ಬರುತ್ತಿದ್ದಾರೆ , ಲೋಕಾಯುಕ್ತರು ನ್ಯಾಯಮೂರ್ತಿಗಳಾದರೆ ಒಳಗಡೆ ಬರುವಂತಹ ಪೊಲೀಸ ರಾಜ್ಯ ಸರ್ಕಾರಕ್ಕೆ ಸೇರುತ್ತಾರೆ , ಸಿಬಿಐ ಕೂಡ ಇವರ ಒಪ್ಪಿಗೆ ಇಲ್ದೆ ಬರುವ ಹಾಗೆ ಇಲ್ಲ ಎಂದು ಕ್ಯಾಬಿನೆಟ್ ಅಲ್ಲಿ ಮಾಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದರು .