ಚಿಕ್ಕೋಡಿ: ಬಾವಿಯಲ್ಲಿ ಬಿದ್ದಿರುವ ಎಮ್ಮೆಯ ಎಮ್ಮೆಯನ್ನು ಸುರಕ್ಷಿತವಾಗಿ ಚಿಕ್ಕೋಡಿ ಆಗ್ನಿಶಾಮಕದಳದವರು ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ತಾಲೂಕಿನ ಕೇರೂರ ಗ್ರಾಮದ ಕುಂಬಾರ ಕ್ರಾಸ್ ಬಳಿ ಇರುವ ಆಳವಾದ ಬಾವಿಯಲ್ಲಿ ಅದೇ ಗ್ರಾಮದ ಶೇಖರ ಮಲಗೌಡ ಪಾಟೀಲ ಅವರಿಗೆ ಸೇರಿದ ಎಮ್ಮೆ ಬಿದ್ದಿತ್ತು.ಸ್ಥಳಕ್ಕೆ ಚಿಕ್ಕೋಡಿ ಅಗ್ನಿಶಾಮಕದವರು ಆಗಮಿಸಿ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನು ರಕ್ಷಣೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಸ್. ಎನ್.ನಿಂಗನೂರಿ, ರಾಚಯ್ಯ ಮಠಪತಿ,ಎಲ್. ಎಸ್.ಶಿರಗಾಂವಿ,ರೂಪೇಶ ಕಿಳ್ಳಿಕೇತ್ತ,ಬಸವರಾಜ ಹಿರೇಗೌಡರ,ಬಸವರಾಜ ಕಾಂಬಳೆ,ಉಮೇಶ ನೇರ್ಲಿಕರ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.