ಬೈಲಹೊಂಗಲ: ಸೋಯಾಬಿನ್ ರಾಶಿ ಮಶೀನ ವಾಹನ ಅಡ್ಡ ಬಂದ ಪರಿಣಾಮ ಎದುರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 6 ಕ್ಕಿಂತ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡ ಘಟನೆ ಮಲಪ್ರಭಾ ನದಿ ಸನಿಹ ಬುಧವಾರ ಮಧ್ಯಾಹ್ನ ಜರುಗಿದೆ.
ಸಾರಿಗೆ ಬಸ್ ಧಾರವಾಡದಿಂದ ಬೈಲಹೊಂಗಲ ಮಾರ್ಗ ಮದ್ಯೆ ಬರುವಾಗ ಮಲಪ್ರಭಾ ನದಿ ಪಕ್ಕದಲ್ಲಿ ಸೋಯಾಬಿನ್ ರಾಶಿ ಮುಗಿಸಿ ಕ್ರಾಸ್ ನಲ್ಲಿ ತೆರಳುವಾಗ ಎದುರಿಗೆ ಬರುತ್ತಿದ್ದ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭೀಕರ ಅಪಘಾತ ತಪ್ಪಿಸಿ ಕಬ್ಬಿನ ಗದ್ದೆಗೆ ಬಸ್ ನುಗ್ಗಿಸಿದ್ದಾನೆ.
ಗಾಯಗೊಂಡ ನಿರ್ವಾಹಕ ಹಾಗೂ ಪ್ರಯಾಣಿಕರನ್ನು ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಜಾಲಿಕೊಪ್ಪ ಗ್ರಾಮಸ್ಥರು 108 ಆಂಬುಲೆನ್ಸ್ ಮೂಲಕ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದಾರೆ.
ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.