ರಾಜಕಾರಣದ ಒಳ ಸುಳಿಗೆ ನೂರು ರೂಪಗಳಿವೆ. ಇಂದು ಗುರು ಶಿಷ್ಯ ಆದವರು ಮುಂದೆ ಅವರ ಸ್ಪರ್ಧಾಳುಗಳಾಗಬಹುದು. ಎದುರಾಳಿಗಳು ಆಗಬಹುದು ಅದೇನು ಹೊಸತಲ್ಲ. ಈಗ ಸದ್ಯ ಸತೀಶ್ ಸಿಎಂ ಆಗುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅದಷ್ಟೇ ಅಲ್ಲ ಅಷ್ಟೇ ಅಲ್ಲ, ಸತೀಶ್ ಸಿಎಂ ಯಾಕ್ಬೇಕು ಅನ್ನೋದಕ್ಕೆ ಒಂದಷ್ಟು ಕಾರಣಗಳೂ ಇವೆ. ಮಹಾಗುರುವಿನ ಬೆಂಬಲವೂ ಇದೆ. ಸತೀಶ್ ಜಾರಕಿಹೊಳಿಗೆ 6 ಶಕ್ತಿಗಳೂ ಇವೆ ಈ ಕುರಿತು ಒಂದು ರಿಪೋರ್ಟ್ ನೋಡಣ ಬನ್ನಿ ..
GFX :
ರಾಜ್ಯಕ್ಕೆ ಮತ್ತೆ ಮುನ್ನೆಲೆಗೆ ಬಂದ ಬೆಳಗಾವಿ ಸಾಹುಕಾರ ಸಿಎಂ ಅಭಿಯಾನ
ರಾಜ್ಯದ ಸಿಎಂ ಆಗುವ 6 ಶಕ್ತಿಗಳು ಸತೀಶ್ ಜಾರಕಿಹೊಳಿ ಬಳಿಯೇ ಇವೆ
ಆ 6 ಶಕ್ತಿಗಳನ್ನು ಪ್ರಯೋಗಿಸಿಯೇ ಮುಂದಿನ ಸಿಎಂ ಆಗಲಿದ್ದಾರಾ ಸಾಹುಕಾರ
ಸಚಿವ ಸತೀಶ್ ಜಾರಕಿಹೊಳಿ 48 ಶಾಸಕರ ಬೆಂಬಲ
GFX OUT
ಹೌದು, ಸತೀಶ್ ಜಾರಕಿಹೊಳಿ ಸಿಎಂ ಆಗ್ಬೇಕು ಅಂತ ಆ ಒಬ್ಬರು ನಿರ್ಧರಿಸಿದರೇ ಎಸ್ಟಿ ಸಮಾಜದ 15 ಶಾಸಕರು ಒಂದಾಗುತ್ತಾರೆ. ಇದಿಷ್ಟೇ ಅಲ್ಲ, 15 ಎಸ್ಟಿ ಸಮಾಜದ ಶಾಸಕರೊಂದಿಗೆ 35ಕ್ಕೂ ಅಧಿಕ ಅಹಿಂದ ಶಾಸಕರ ದಂಡು ಬಂದು ನಿಲ್ಲುತ್ತದೆ. ಅಷ್ಟರ ಮಟ್ಟಿಗಿನ ಎಂಎಲ್ಎ ಶಕ್ತಿ ಸತೀಶ್ ಬೆನ್ನಿಗಿದೆ.
GFX : ಸತೀಶ್ ಶಕ್ತಿ 2 ; ವಿವಾದವಿಲ್ಲದ ನಾಯಕ
ಸುದೀರ್ಘ 30 ವರ್ಷಗಳ ರಾಜಕಾರಣದ ಅನುಭವ ಇರುವ ಸತೀಶ್ ಜಾರಕಿಹೊಳಿ ವಿವಾದಗಳ ಸನಿಹಕ್ಕೂ ಹೋಗುವುದಿಲ್ಲ. ಮೌಢ್ಯ ವಿರೋಧಿ ವಿಚಾರಕ್ಕಷ್ಟೇ ಸತೀಶ್ ಜಾರಕಿಹೊಳಿ ಹೆಸರು ವಿವಾದದಲ್ಲಿ ಕೇಳಿ ಬರುತ್ತದೆ. ಬದಲಿಗೆ 1998ರಲ್ಲಿ ಎಂಎಲ್ ಸಿ ಆದಾಗಿನಿಂದ 2023ರಲ್ಲಿ ಯಮಕನಮರಡಿ ಶಾಸಕರಾಗಿ ಮರು ಆಯ್ಕೆ ಆದ ತನಕವೂ ಯಾವುದೇ ಹಗರಣದ ವಿವಾದಗಳಲ್ಲಿ ಸತೀಶ್ ಜಾರಕಿಹೊಳಿ ಹೆಸರಿಲ್ಲ. ಇದೂ ಸಹ ಸತೀಶ್ ಮುಖ್ಯಮಂತ್ರಿ ಆಗ್ಬೇಕು ಅನ್ನೋದಕ್ಕೆ ಶಕ್ತಿಯಾಗಿ ಕಾಣುತ್ತದೆ.
GFX : ಸತೀಶ್ ಶಕ್ತಿ 3 : ಜನ+ಹಣದ ಪ್ರಭಾವ
ಹೆಸರಲ್ಲೇ ಸಾಹುಕಾರರಾಗಿರೋ ಸತೀಶ್ ಜಾರಕಿಹೊಳಿ ಸಿಎಂ ಸ್ಥಾನಕ್ಕೇರಬೇಕು ಅನ್ನೋದಾದರೇ ಬಹುಮುಖ್ಯವಾಗಿ ಎರಡೂ ಪ್ರಭಾವಗಳಿವೆ. ಒಂದು ಜನ ಬಲ ಮತ್ತೊಂದು ಹಣ ಬಲ. ಈ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ರಾಜ್ಯದ ಪ್ರಭಾವಿ ಸಮಾಜದ ಅಗ್ರಗಣ್ಯ ನಾಯಕರಾಗಿ ಈ ಕ್ಷಣಕ್ಕೂ ಕಾಣುತ್ತಿದ್ದಾರೆ. ಇನ್ನು, ಹಣ ಬಲದ ವಿಚಾರಕ್ಕೆ ಬರೋ ಮಾತೇ ಇಲ್ಲ. ಇವತ್ತು ರಾಜ್ಯದಲ್ಲಿ ಅಹಿಂದ ರಣಕೇಕೆ ಹಾಕುತ್ತಿದೆ ಅಂದರೇ ಅದಕ್ಕೆ ಮೊದಲು ಹಣ ನೀಡಿದ್ದು ಇಬ್ಬರು. ಒಬ್ಬರು ಈಡಿಗ ಸಮಾಜದ ಆರ್ಎಲ್ ಜಾಲಪ್ಪ. ಮತ್ತೊಬ್ಬರು ವಾಲ್ಮೀಕಿ ನಾಯಕ ಸಮಾಜದ ಸತೀಶ್ ಜಾರಕಿಹೊಳಿ .
GFX :
ಸತೀಶ್ ಶಕ್ತಿ 4 ; ಸೈಲೆಂಟ್ ಗೇಮರ್
ಸತೀಶ್ ಜಾರಕಿಹೊಳಿ ರಾಜಕಾರಣ ಇನ್ನುಳಿದ ನಾಯಕರಿಗಿಂತ್ಲೂ ಭಿನ್ನ. ಎಲ್ಲವೂ ಸೈಲೆಂಟಾಗಿಯೇ ಇರುತ್ತದೆ. ರಾಜ್ಯ ರಾಜಕಾರಣದ ಸರ್ಜಿಕಲ್ ಸ್ಟ್ರೈಕ್ ಎಕ್ಸ್ಪರ್ಟ್ ಯಾರಾದ್ರೂ ಇದ್ರೆ ಅದು ಸತೀಶ್ ಜಾರಕಿಹೊಳಿಯೇ. ಯಾಕಂದ್ರೆ, ರಾಜಕೀಯ ಎದುರಾಳಿಯ ಮಹಬಲಕ್ಕೂ, ಮಾಸ್ಟರ್ ಮೈಂಡ್ಗೂ ಮುಟ್ಟಿ ನೋಡಿಕೊಳ್ಳುವಂಥಾ ರಣತಂತ್ರದ ರೂವಾರಿ ಇದೇ ಸತೀಶ್. ಈ ಸೈಲೆಂಟ್ ಗೇಮ್ ಕೂಡ ಸತೀಶ್ ಪಾಲಿಗೆ ಮಹಾಶಕ್ತಿಯಾಗಿದೆ.
GFX : ಸತೀಶ್ ಶಕ್ತಿ 5; ಸೌಮ್ಯ ಸ್ವಭಾವ, ಚಾಣಕ್ಯ
ಚಂದ್ರಗುಪ್ತ ಮೌರ್ಯ ಅನ್ನೋ ದೊರೆ ಚಾಣಕ್ಯನಿಂದಾಗಿ ದೊರೆಯಾದ. ಆದರೇ, ದೊರೆಯೇ ಚಾಣಕ್ಯನಾಗಿದ್ದರೆ. ಅದರಲ್ಲೂ ಕಡುಕೋಪದ ವಿಷ್ಣುಗುಪ್ತನಿಗಿಂತ ಸೌಮ್ಯ ಸ್ವಭಾವದ ರಣತಂತ್ರಗಾರ ಗುಣ ಸತೀಶ್ರಲ್ಲಿದೆ. ಈ ವಿಷಯಕ್ಕೆ ಬಂದರೇ ಎಂತಹ ಅಪಮಾನವನ್ನಾದರೂ ನಗುತ್ತಲೇ ಸಹಿಸಿ, ಎದುರಾಳಿಗೆ ಜಂಘಾಬಲವನ್ನೇ ನಡುಗಿಸೋ ಸೋಲುಣಿಸುವ ಚಾಣಾಕ್ಷ ಗುಣ ಸತೀಶ್ ಪಾಲಿಗೆ ಮಹಾ ಶಕ್ತಿ. ಹೌದು, ಸತೀಶ್ ಸಿಎಂ ಆಗ್ಬೇಕು ಅನ್ನೋದಕ್ಕೆ ಈ ಅಂಶವೂ ಮುಖ್ಯವಾಗುತ್ತದೆ .
GFX : ಸತೀಶ್ ಶಕ್ತಿ 6; ಹೈಕಮಾಂಡ್ಗೆ ಅಚ್ಚುಮೆಚ್ಚು
ಹಳ್ಳಿಯಲ್ಲಿ ಎಷ್ಟೇ ಸ್ಟ್ರಾಂಗ್ ಇದ್ರೂ ಡೆಲ್ಲಿಯಲ್ಲೂ ಮೆಚ್ಚುಗೆ ಆಗಬೇಕು. ಇದು ಕಾಂಗ್ರೆಸ್ ಪಾಲಿನ ಬಹುಮಖ್ಯ ಸಂಗತಿ. ಸಿದ್ದರಾಮಯ್ಯರೊಂದಿಗೆ ಕಾಂಗ್ರೆಸ್ ಸೇರಿದಾಗಿನಿಂದ ಇಲ್ಲಿಯ ತನಕ ಹೈಕಮಾಂಡ್ ಸಂಸ್ಕೃತಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಹೈಕಮಾಂಡ್ ಜೊತೆ ಅದ್ಭುತವಾಗಿದ್ದಾರೆ. ಇದು ಸಿಎಂ ಆಗೋ ಸತೀಶ್ ಹಾದಿಗೆ ವರವಾಗಲಿದೆ.
ಒಟ್ಟಿನಲ್ಲಿ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನಿಗೆ ಹಿನ್ನೆಡೆಯಾದರಿಂದ , ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ , ಈ ಹಿಂದೆ ಯಡಿಯೂರಪ್ಪ ಮೇಲೆ ಆರೋಪಗಳು ಒಂದಾಗ ಸದಾನಂದ ಗೌಡರನ್ನು ಸಿಎಂ ಮಾಡಿ ಕಳೆಗೆ ಇಳಿದರು , ಆ ರೀತಿ ಸಿಎಂ ರಾಜೀನಾಮೆ ನೀಡಿದ್ದರೆ ಸತೀಶ್ ಜಾರಕಿಹೊಳಿ ಸಿಎಂ ಆಗುವ ಸಾಧ್ಯತೆಗಳು ಹೆಚ್ಚಿವೆ ಎನ್ನಬಹದು , ಸತೀಶ್ ಜಾರಕಿಹೊಳಿ ಸಿಎಂ ಯಾದರೆ ಬೆಳಗಾವಿ ಜಿಲ್ಲಾ ವಿಭಜನೆಗೆ ಸಹಕಾರಿಯಾಗಲ್ಲಿದೆ ಎನ್ನಬಹುದು …
ಹರೀಶ್
ಇನ್ ನ್ಯೂಸ್ ಬೆಳಗಾವಿ