hubbali

ರಾಜ್ಯ‍ಪಾಲರು ಸರ್ಕಾರಕ್ಕೆ ಕಿರುಕುಳ ನೀಡಬಾರದು : ದಿನೇಶ್ ಗುಂಡೂರಾವ್

Share

ಮುಡಾ ಅಸ್ತ್ರ ವ್ಯವಸ್ಥಿತವಾದ ಸಂಚು. ಸಂಚು ಮಾಡೋದ್ರಲ್ಲಿ ಬಿಜೆಪಿಯವರು ನಿಸ್ಸಿಮರು ಎಂದು ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಾವು ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುತ್ತಿಲ್ಲ. ಸಂವಿಧಾನದಲ್ಲಿ ರಾಜ್ಯಪಾಲರಿಗೆ ಅನೇಕ ಜವಾಬ್ದಾರಿ, ಗೌರವ ಕೊಟ್ಟಿದ್ದೇವೆ. ಒಂದು ಸರ್ಕಾರಕ್ಕೆ ಕಿರುಕುಳ ಕೊಡವುದು, ಅನಾವಶ್ಯಕವಾಗಿ ಪತ್ರ ವ್ಯವಹಾರ ಮಾಡುವಂಥದ್ದನ್ನ ರಾಜ್ಯಪಾಲರು ಮಾಡಬಾರದು. ಯಾವುದೇ ಉತ್ತರ ಕೊಡಬೇಕಾದಾಗ ಅಧಿಕಾರಿಗಳಿಗೆ ಸಮಸ್ಯೆ ಆಗುತ್ತೆ. ಹೀಗಾಗಿ ಸಚಿವ ಸಂಪುಟ ಎದುರು ಬಂದನಂತರ ಹೋಗುವಂತ ತೀರ್ಮಾನ ಕೈಗೊಂಡಿದ್ದೇವೆ ಎಂದರು.

ರಾಜ್ಯಪಾಲರು ರಾಜಕೀಯವಾಗಿ ಕೆಲಸ ಮಾಡಬಾರದು. ಸಂವಿಧಾನವನ್ನು ಎತ್ತಿ ಹಿಡಿದು ಗೌರವಯುತವಾಗಿ ನಡೆದುಕೊಳ್ಳಬೇಕು. ಸರ್ಕಾರದ ಜೊತೆ ಕೈ ಜೋಡಿಸಬೇಕು. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯದಲ್ಲಿ ರಾಜ್ಯಪಾಲರು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ನಮ್ಮ ರಾಜ್ಯಪಾಲರು ನಡೆದುಕೊಳ್ತಿರೋದು ದುರಾದೃಷ್ಟಕರ ಎಂದು ಅವರು ಹೇಳಿದರು.

ಸಿಎಂ ರಾಜೀನಾಮೆಗೆ ಆಗ್ರಹಿಸಿದ ಕೋಳಿವಾಡ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ರಾಜಕೀಯ ಕ್ಷೇತ್ರದಲ್ಲಿ ಇಲ್ಲ. ನಾವೆಲ್ಲಾ ಒಗ್ಗಟ್ಟಾಗಿ ಇದ್ದಿವಿ. ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿದೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಬೊಮ್ಮಾಯಿ ಅವರು ರಾಜೀನಾಮೆಗೆ ಆಗ್ರಹಿಸಿದ್ದಾರೆ, ಅವರು ವಿರೋಧ ಪಕ್ಷದಲ್ಲಿದ್ದಾರೆ. ಸಿಎಂ ಯಾವುದೇ ಅಧಿಕಾರ ದುರುಪಯೋಗ ಮಾಡಿಲ್ಲ. ಕಾನೂನು ಪ್ರಕಾರ ವಿಚಾರ ನಡೆಯಲಿ, ಹೋರಾಟ ಮಾಡ್ತಾರೆ ರಾಜ್ಯವನ್ನು ಕಟ್ಟುವ ಜವಾಬ್ದಾರಿ ನಮ್ಮದು. ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ತಿದೆ. ಯಾವ ಸರ್ಕಾರ ಉಳಿಬಾರದು, ಸರ್ಕಾರ ನಡೆಸಲು ಬಿಡದಂತೆ ಪಕ್ಷದಲ್ಲಿದ್ದಾರೆ. ಸಿಎಂ ಯಾವುದೇ ಅಧಿಕಾರ ದುರುಪಯೋಗ ಮಾಡಿಲ್ಲ. ಕಾನೂನು ಪ್ರಕಾರ ವಿಚಾರ ನಡೆಯಲಿ, ಹೋರಾಟ ಮಾಡ್ತಾರೆ ರಾಜ್ಯವನ್ನು ಕಟ್ಟುವ ಜವಾಬ್ದಾರಿ ನಮ್ಮದು. ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ತಿದೆ. ಯಾವ ಸರ್ಕಾರ ಉಳಿಬಾರದು, ಸರ್ಕಾರ ನಡೆಸಲು ಬಿಡದಂತೆ ಕೇಂದ್ರ ಸರ್ಕಾರ ನಡೆದುಕೊಳ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿಚಾರವನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡರೆ ಯಾವುದೇ ಪ್ರಯೋಜನವಾಗಲ್ಲ ಎಂದು ಪ್ರಧಾನಿ ಮೋದಿಗೆ ಸಚಿವ ದಿನೇಶ್ ಗುಂಡೂರಾವ್ ಟಾಂಗ್ ನೀಡಿದರು.

Tags:

error: Content is protected !!