Chikkodi

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ

Share

ಚಿಕ್ಕೋಡಿ: ರಾಯಬಾಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 15 ವರ್ಷಗಳಿಂದ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೈಗೊಳ್ಳಲಾಗುತ್ತಿದ್ದು, ಮಾದರಿ ಕ್ಷೇತ್ರವಾಗಿ ಪರಿವರ್ತಿಸಲಾಗುವುದು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಕಬ್ಬೂರ ಪಟ್ಟಣದ ವ್ಯಾಪ್ತಿಯಲ್ಲಿ ಜಿ.ಪಂ ಅನುದಾನದಲ್ಲಿ ಬಿಡುಗಡೆಯಾದ 90 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಲ್ಲೂರ- ಮೇಖಳಿ ರಸ್ತೆಯಿಂದ ಕಾಡೇಶಗೋಳ ತೋಟದವರೆಗೆ 40 ಲಕ್ಷ ರೂ. ಹಾಗೂ ಕಲ್ಲೂರ-ಮುಲ್ತಾನಿಕೋಡಿ ರಸ್ತೆಯಿಂದ ಕೆಂಗೇರಿಕೋಡಿ ರಸ್ತೆವರೆಗೆ ಅಭಿವೃದ್ಧಿಪಡಿಸಲು
50 ಲಕ್ಷರೂ, ಬಿಡುಗಡೆಯಾಗಿದೆ,” ಎಂದರು.

ಹಿರಾ ಶುಗರ್ ನಿರ್ದೇಶಕ ಸುರೇಶ ಬೆಲ್ಲದ, ಸಂಜು ಕಲ್ಯಾಣಕರ, ಗೈಬುಸಾಬ ಮಾತನಾಡಿದರು. ಈ ವೇಳೆ ಬಿ.ಡಿ. ಮುಲ್ತಾನಿ, ಪೀರ್ ಸಾಬ್ ಮುಲ್ತಾನಿ, ರುದ್ರಪ್ಪ ನಾಯಿಕವಾಡಿ, ಜೆ.ಎಸ್.ಕಾಮಕರ, ಸದಾಶಿವ ಕೋಕಾಟೆ, ಮಹಾದೇವ ದೆಸಾಯಿ, ಮಲ್ಲ ಘೋರ್ಪಡೆ, ಅಪ್ಪಾಸಾಹೇಬ ಖೇಮಲಾಪುರೆ, ಹಿರೇಕೋಡಿ, ಅಮೀರ್ ಮುಲ್ತಾನಿ, ಬಸಲಿಂಗ ಕಾಡೇಶಗೋಳ, ಮಹಾದೇವ ರಾಮಗೌಡ ಪಾಟೀಲ, ಶಿವಪ್ಪ ಕಾಡೇಶಗೋಳ ಜಿವಣಿ, ಅಪಣ್ಣ ಕಾಡೇಶಗೋಳ, ಮಹಾಲಿಂಗ ಇತರರು ಉಪಸ್ಥಿತರಿದ್ದರು.

Tags:

error: Content is protected !!