ಅಥಣಿ – ಅಪರಿಚಿತ ಜನರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೇ, ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೂ ಬಂದು ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿದ ಘಟನ ಅಥಣಿ ತಾಲೂಕಿನ ಕಕಮರಿ ಗ್ರಾಮದಲ್ಲಿ ನಡೆದಿದೆ.
ಸುಮಾರು 15-16 ದಿನಗಳ ಹಿಂದೆ ಅಥಣಿ ಪಟ್ಟಣದ ಶಶಿಕಾಂತ ಲಕ್ಷ್ಮಣ ಅಕ್ಕೆನ್ನವರ ಅವರಿಗೆ ತಾಲೂಕಿನ ಕಕಮರಿ ಗ್ರಾಮದಲ್ಲಿ ಜಮೀನೊಂದು ಮಾರಾಟಕ್ಕಿದೆ ಎಂಬ ಮಾಹಿತಿ ಬಂದಿದ್ದಂತೆ. ಅದರ ಅನ್ವಯ ಅವರು ಜಮೀನು ನೋಡಲು ಹೋದಾಗ ಅಲ್ಲಿದ ಮಹಿಳೆ ಸೇರಿದಂತೆ 6 ಜನ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ಯುವಕನ ಮಾರ್ಮಾಂಗಕ್ಕೆ ಒದ್ದು ಗಾಯಪಡಿಸಿದ್ದು, ಯುವಕನಿಗೆ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೇ ಆಸ್ಪತ್ರೆಗೆ ಬಂದು ಕೂಡ ಜೀವ ಬೆದರಿಕೆ ಹಾಕಲಾಗುತ್ತಿದೆ. ಸೂಕ್ತ ಕಾನೂನು ಕ್ರಮ ಕೈಗೊಂಡು, ನಮಗೆ ನ್ಯಾಯ ನೀಡಬೇಕೆಂದು ಗಾಯಾಳು ಶಶಿಕಾಂತ ಅಕ್ಕೆನ್ನವರ ಆರೋಪಿಸಿದ್ದಾರೆ.
ಈ ಕುರಿತು ಐಗಳಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.