Vijaypura

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಖಡಕ್ ಎಚ್ಚರಿಕೆ ನೀಡಿದ ಸಚಿವ ಶಿವಾನಂದ ಪಾಟೀಲ

Share

ಸಕ್ಕರೆ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ ಘಟನೆ ನಡೆಯಿತು‌‌‌. ಸರಿಯಾಗಿ ಕೆಲಸ ಮಾಡಲು ಸೂಚಿಸಿದರು. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಸಚಿವ ಶಿವಾನಂದ ಪಾಟೀಲ ಖಡಕ್ ಎಚ್ಚರಿಕೆ ನೀಡಿದರು.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಪುರಸಭೆ ಕಾರ್ಯಾಲಯದಲ್ಲಿ ಶುಕ್ರವಾರ ಕೆಡಿಪಿ ಸಭೆಯು ಸಚಿವ ಶಿವಾನಂದ ಪಾಟೀಲ್ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯಲ್ಲಿ ಬಸವನ ಬಾಗೇವಾಡಿ. ನಿಡಗುಂದಿ ಹಾಗೂ ಕೋಲಾರ್ ತಾಲೂಕಿನ ತಹಶೀಲ್ದಾರರು, ತಾಲೂಕ ಪಂಚಾಯಿತಿ ಅಧಿಕಾರಿಗಳು ಪುರಸಭೆ ಅಧಿಕಾರಿಗಳು ಹಾಗೂ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಆಯಾ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಯಿತು. ಆರೋಗ್ಯ ಇಲಾಖೆಯವರು ಹಾಗೂ ಕೆಇಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಕೆಲಸ ಮಾಡಲು ಸೂಚಿಸಿದರು. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು,

ತಾಲೂಕಿನ ಪಿಡಿಒಗಳು ಸ್ಥಳದಲ್ಲಿ ಇದ್ದು ಗ್ರಾಮದ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು ವಿಶೇಷವಾಗಿ ಕೂಡಗಿ ಗ್ರಾಮಕ್ಕೆ 10 ಕೋಟಿ ರೂಪಾಯಿ ನೀಡಿದ್ದರು ಮುಕ್ತ ಶೌಚಾಲಯಗಳು ಮರೀಚಿಕೆ ಯಾಗಿವೆ. ಅದಕ್ಕಾಗಿ ಪಿಡಿಒಗಳು ಗ್ರಾಮದ ಅಭಿವೃದ್ಧಿಗಾಗಿ ಗಮನ ಹರಿಸಬೇಕು. ಅದೇ ರೀತಿಯಾಗಿ ಆ ಕೃಷಿ ಇಲಾಖೆಯ ಅಧಿಕಾರಿ ಎಂ ಎಚ್ ಯರಜರಿಯವರು ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕಂದಾಯ ಉಪ ವಿಭಗಾಧಿಕಾರಿ ಗುರುನಾಥ್ ದಡ್ಡಿ ಬಸವನ ಬಾಗೇವಾಡಿ ತಹಶೀಲ್ದಾರರಾದ ಯಮನಪ್ಪ ಸೋಮನಕಟ್ಟಿ ಹಾಗೂ ನಿಡಗುಂದಿ ತಹಶೀಲ್ದಾರ್ ಎ ಡಿ ಅಮರವಾಡಗಿ ಕೋಲಾರ ತಹಸಿಲ್ದಾರ ಎಸ್ ಎಸ್ ನಾಯ್ಕಲ್ಮಠ ತಾಲೂಕು ಪಂಚಾಯಿತಿ EO ಪ್ರಕಾಶ್ ದೇಸಾಯಿ ಸುನಿಲ್ ಮದ್ದಿನ್ ವೆಂಕಟೇಶ ವಂದಾಲ ಪುರಸಭೆ ಮುಖ್ಯ ಅಧಿಕಾರಿ ರುದ್ರೇಶ್ ಚಿತ್ತರಗಿ ಮುಂತಾದ ತಾಲೂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.

 

Tags:

error: Content is protected !!