ತೀವ್ರ ಮಳೆ ಹಾನಿಗೊಳಗಾಗಿರುವ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಅತಾಲಟ್ಟಿ, ಕೋಟ್ಯಾಳ ಗ್ರಾಮಗಳಿಗೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಢೋಣಿ ನದಿ ಅಪಾಯದ ಮಟ್ಟ ಮೀರಿ ಹರಿದು ಹೋಗಿದೆ. ಮನೆಯೊಂದರ ಮಾಡು ಹಾರಿಹೋಗಿದ್ದು, ಶೀಘ್ರವೇ ಸಂತ್ರಸ್ಥರಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಾರವಾಡ, ತೊನಶ್ಯಾಳ ಹಾಗೂ ಇತರ ಗ್ರಾಮಗಳಿಗೂ ಭೇಟಿ ನೀಡಿದರು. ಜಿಲ್ಲೆಯಲ್ಲಿ ತಾಲ್ಲೂಕಿನ ವ್ಯಾಪ್ತಿ ನೋಡೆಲ್ ಆಫೀಸರ್ ಗಳನ್ನು ನೇಮಕ ಮಾಡಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಬೆಳೆಹಾನಿ ಪ್ರಮಾಣವನ್ನು ಅಂದಾಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಿಕೋಟಾ ತಾಲೂಕಿನ ಅತಾಲಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಮನೆಗಳು ಬಿದ್ದದ್ದನ್ನು ವೀಕ್ಷಣೆ ಮಾಡಿದರು.
ಗೀತಾ ಕಾಂಭ್ಳೆ ಎಂಬುವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದ ಅದನ್ನು ವೀಕ್ಷಣೆ ಮಾಡಿ ಪರಿಹಾರ ಕೊಡಿಸುವ ಭರವಸೆ ನೀಡಿದರು. ಬಳಿ ಸಾರವಾಡ ಗ್ರಾಮದ ಬಳಿ ಡೋಣ ನದಿಯಿಂದ ಹಾನಿಯಾದ ಪ್ರದೇಶ ವೀಕ್ಷಣೆ ಮಾಡಿದರು. ಬಳಿಕ ಜಿಲ್ಲೆಯ ಆಯಾ ತಾಲ್ಲೂಕಗಳಲ್ಲಿ ತಹಶಿಲ್ದಾರ, ಉಪವಿಭಾಧಿಕಾರಿ ಹಾಗೂ ಇಂಜಿನಿಯರಗ ನ್ನೊಳಗೊಂಡ ಟಾಸ್ಕ್ ಫೋರ್ಸ್ ರಚಿಸಿ ಕಾರ್ಯಗತಗೊಳ್ಳಲು ಸೂಚನೆ ನೀಡಿದರು.