Protest

ಟಿ.ಎಚ್.ಓ ನಿಂದಿಸಿದ ಇಂಚಲ ಪಿಡಿಓ ಕ್ಷಮೆ ಕೇಳಲಿ; ಸವದತ್ತಿಯಲ್ಲಿ ವೈದ್ಯಾಧಿಕಾರಿಗಳ ಪ್ರತಿಭಟನೆ

Share

ಸವದತ್ತಿ ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀಪಾದ ಸಬನೀಸ ಇವರಿಗೆ ದೂರವಾಣಿಯಲ್ಲಿ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಇಂಚಲ ಪಿಡಿಓ ಮಲ್ಲಪ್ಪ ಹಾರುಗೊಪ್ಪ ಕ್ಷಮೆ ಕೇಳುವಂತೆ ತಾಲೂಕು ಆರೋಗ್ಯಾಧಿಕಾರಿಗಳ ಸಿಬ್ಬಂದಿ ಪ್ರತಿಭಟನೆ ನಡೆಸಿದರು .

ಸವದತ್ತಿ ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀಪಾದ ಸಬನೀಸ ಇವರಿಗೆ ದೂರವಾಣಿಯಲ್ಲಿ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಇಂಚಲ ಪಿಡಿಓ ಮಲ್ಲಪ್ಪ ಹಾರುಗೊಪ್ಪ ವಿರುದ್ದ ಸವದತ್ತಿ ತಾಲೂಕಾ ಆರೋಗ್ಯಾಧಿಕಾರಿಗಳ ಸಿಬ್ಬಂದಿಯವರು ಸೋಮವಾರದಂದು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ತಾಲೂಕು ನೌಕರರ ಸಂಘದ ಅಧ್ಯಕ್ಷ ಆನಂದಕುಮಾರ ಮೂಗಬಸವ ಮಾತನಾಡಿ, ಒಬ್ಬ ಸಿ ದರ್ಜೆ ನೌಕರ ಆರೋಗ್ಯಾಧಿಕಾರಿಗಳಿಗೆ ಏಕ ವಚನದಲ್ಲಿ ಮಾತನಾಡುವದಲ್ಲದೆ ತನ್ನ ಅಧಿಕಾರದ ದರ್ಪದಿಂದ ಹಿರಿಯ ಅಧಿಕಾರಿಗಳನ್ನು ನಿಂದಿಸಿರುವುದು ಖಂಡನಾರ್ಹವಾಗಿದೆ ಸೌಜನ್ಯತೆಯನ್ನು ಮರೆತ ಇಂಚಲ ಪಿಡಿಓ ನ ಮೇಲೆ ಕೂಡಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೂಡಲೆ ಈ ನೌಕರನ ಮೇಲೆ ಕ್ರಮ ಕೈಗೊಳ್ಳದೆ ಹೋದಲ್ಲಿ ಉಗ್ರ ಹೋರಾಟ ಮಾಡುವದಾಗಿ ಆಗ್ರಹಿಸಿದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಎಮ್.ಎಚ್.ಮಲ್ಲನಗೌಡರ ಮಾತನಾಡಿ, ಅರೋಗ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಅನಾವಶ್ಯಕವಾಗಿ ದರ್ಪ ತೋರುವುದು ಸರಿಯಲ್ಲದಾಗಿದ್ದು, ಅದು ಒಬ್ಬ ಸರಕಾರಿ ನೌಕರ ಹಿರಿಯ ಆರೋಗ್ಯಾಧಿಕಾರಿಗಳಿಗೆ ಅಸಭ್ಯ ರೀತಿಯಲ್ಲಿ ಮಾತನಾಡಿರುವುದು ಸಮಂಜಸವಲ್ಲ ಎಂದರು. ಕೂಡಲೆ ತಪ್ಪಿತಸ್ಥನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದರು.

ಪ್ರತಿಭಟನೆಯಲ್ಲಿ ಟಿಎಚ್ ಓ ಡಾ.ಶ್ರೀಪಾದ ಸಬನೀಸ, ಡಾ.ವಿಜಯ ನರಗುಂದ, ಡಾ.ಆರ್.ಆರ್.ಹಿರೇಕುಂಬಿ, ಬಿ.ಕೆ. ಮುಲ್ಲಾ, ಡಾ.ಜ್ಯೋತಿ ಬಸರಿ, ಡಾ.ಕೃಷ್ಣಾ ಹನಸಿ, ಎಸ್.ಎಸ್.ಹಿರೇಮಠ, ಅಬ್ದುಲ್ ಬಸ್ತಿ, ಡಾ.ಶಿವನಗೌಡರ, ಡಾ.ನಾಸರಡ್ಡಿ ಹಾಗೂ ತಾಲೂಕಿನ ಅರೆ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

Tags:

error: Content is protected !!