Uncategorized

ಕುಡಚಿ ಪಿಎಸ್ಐ ಸುರೇಶ್ ಖೋತ ನಿಧನ

Share

ಕಾಗವಾಡದ ಸುಪುತ್ರ ಮತ್ತು ಕುಡಚಿ ಪೊಲೀಸ್ ಠಾಣೆ ಪಿಎಸ್ಐ ಸುರೇಶ್ ಬಾಳಸಾಹೇಬ್ ಖೋತ (58) ಇಂದು ಶನಿವಾರ ಬೆಳಗ್ಗೆ ಹೃದಯಘಾತದಿಂದ ನಿಧನರಾದರು.

ಮೃತರು ಪತ್ನಿ ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರು ಬೆಳಗಾವಿ ಜಿಲ್ಲೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. . ಕಾಗವಾಡ ಪೊಲೀಸ್ ಠಾಣೆಯಲ್ಲಿ ಎ ಎಸ್ ಐ ಬಳಿಕ ರಾಯಬಾಗ ಮತ್ತು ಕುಡುಚಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ನಾಳೆ ಕಾಗವಾಡದ ಸ್ಮಶಾನಭೂಮಿಯಲ್ಲಿ ಸರ್ಕಾರಿ ಗೌರವದೊಂದಿಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಕಾಗವಾಡದ ಬ್ರಹ್ಮನಾಥ ಸೊಸೈಟಿಯ ನಿವೃತ್ತ ವ್ಯವಸ್ಥಾಪಕ ರಾಜೇಂದ್ರ ಖೋತ ಅವರ ಸಹೋದರರಾಗಿದ್ಧರು.

Tags:

error: Content is protected !!