Kagawad

ಶೇಡಬಾಳದ ಜುಡೊ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Share

ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಶ್ರೀ ಸನ್ಮತಿ ಶಿಕ್ಷಣ ಸಮಿತಿಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಜುಡೊ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಈ ವಿದ್ಯಾರ್ಥಿಯನ್ನು ರಾಜವರ್ಧನ ಖರಾತ ವಿದ್ಯಾರ್ಥಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟದ ಜುಡೊ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಬರುವ ನವ್ಹೆಂಬರ್ 7 ರಂದು ಜಮ್ಮು-ಕಾಶ್ಮೀರದಲ್ಲಿ ಜರುಗುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾನೆ. ಈ ನಿಮಿತ್ಯ ವಿದ್ಯಾರ್ಥಿಗೆ ಮತ್ತು ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಸಂಸ್ಥೆಯ ವತಿಯಿಂದ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಶುಕ್ರವಾರ ಸಂಜೆ ಸನ್ಮತಿ ಶಿಕ್ಷಣ ಸಮಿತಿಯ ಸಂಸ್ಕøತಿಕ ಭವನದಲ್ಲಿ ಸನ್ಮಾನ ಸಮಾರಂಭ ನೆರವೇರಿತು. ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿಗಳಾದ ರಾಜವರ್ಧನ ಖರಾತ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಜುಡೊ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾನೆ. ಅದೇ ರೀತಿ ವಿಶ್ವಜಿತ ಪಾಟೀಲ ಮತ್ತು ರಿತೇಶ ಪೂಜಾರಿ ಈ ವಿದ್ಯಾರ್ಥಿಗಳು ಜುಡೊ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರನ್ನು ಹಾಗೂ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ಇದೇ ಶಾಲೆಯ ಮಾಜಿ ವಿದ್ಯಾರ್ಥಿ ಉತ್ಕರ್ಷ ಪಾಟೀಲ, ಉಪಾಧ್ಯಕ್ಷರಾಗಿ ದೀಪಾ ಹೊನಕಾಂಬಳೆ ಇವರು ಆಯ್ಕೆಯಾಗಿದ್ದರಿಂದ ಮತ್ತು ನಿವೃತ್ತ ಸಿಬ್ಬಂದಿ ಅಶೋಕ ತಿರ್ಥ ಹಾಗೂ ಎಲ್ಲಾ ಸದಸ್ಯರೊಂದಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಮೂರು ಜನ ಜುಡೊ ಸ್ಪರ್ಧೆ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರಿಂದ ಸನ್ಮತಿ ಶಿಕ್ಷಣ ಸಮಿತಿಯ ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರು ಶಾಲೆಯ ಮುಖ್ಯಾಧ್ಯಾಪಕರು, ಸಹಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಪುಷ್ಪವೃಷ್ಟಿ ಮಾಡುವದೊಂದಿಗೆ ಸನ್ಮಾನ ಸ್ಥಳಕ್ಕೆ ಕರೆತಂದರು. ರಾಜವರ್ಧನ ಖರಾತ 40 ಕೇಜಿ ತೂಕಿನ ಜುಡೊ ಸ್ಪರ್ಧೆಯಲ್ಲಿ ತನ್ನ ಸಾಧನೆ ಮಾಡಿದ್ದಾನೆ. ವಿಶ್ವಜೀತ ಪಾಟೀಲ ಹಾಗೂ ರಿತೇಶ ಪೂಜಾರಿ ಈ ಇಬ್ಬರು 80 ಕೇಜಿ ತೂಕಿನ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ. ಮುಖ್ಯಾಧ್ಯಾಪಕ ಎಂ.ಎನ್.ಕಾಳೆನಟ್ಟಿ ಹಾಗೂ ದಹಿಕ ಶಿಕ್ಷಕ ಎಂ.ಕೆ.ಕಾಂಬಳೆ, ಕ್ರೀಡಾ ಸ್ಪರ್ಧಕರಿಗೆ ತರಬೇತಿ ನೀಡಿದ್ದ ಸಂತೋಷ ಪೂಜಾರಿ, ಸಂಸ್ಥೆಯ ಅಧ್ಯಕ್ಷ ವಿನೋದ ಬರಗಾಲೆ ಇವರು ವಿದ್ಯಾರ್ಥಿಗಳ ಸಾಧನೆ ಬಗ್ಗೆ ಗೌರವಿಸಿ ಅಭಿನಂದಿಸಿದರು.

ಮಾಜಿ ಗ್ರಾಮ ಪಂಚಾಯಿತಿ ಸದಸ್ಯ, ದಲಿತ ಮುಖಂಡ ಸುಭಾಶ ಢಾಲೆ ಮಾತನಾಡಿ, ಸನ್ಮತಿ ಶಿಕ್ಷಣ ಸಮಿತಿಯ ಎಲ್ಲ ಸಮಸ್ಯೆಗಳಿಗೆ ನಾವೆಲ್ಲ ಮಾಜಿ ವಿದ್ಯಾರ್ಥಿಗಳು ಸದಸ್ಯರಾಗಿ ಆಯ್ಕೆಯಾಗಿದ್ದು, ಸಂಸ್ಥೆಯ ಎಲ್ಲಾ ಕುಂದುಕೊರತೆಗಳು ಆಲಿಸುತ್ತೇವೆಯೆಂದು ಭರವಸೆ ನೀಡಿದರು. ಶಿಕ್ಷಣ ಸಂಸ್ಥೆಯ ಆರ್ಥಿಕ ಸಮಸ್ಯೆಗಳಿಂದ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿಯ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ವೃಷಭ ಚೌಗುಲೆ ಮತ್ತು ಬಾಹುಬಲಿ ನಾಂದ್ರೆ ಆರ್ಥಿಕ ಸಹಾಯ ನೀಡಿದರು. ಅವರನ್ನು ಈ ವೇಳೆ ಸನ್ಮಾನಿಸಲಾಯಿತು.

ಸನ್ಮತಿ ಶಿಕ್ಷಣ ಸಮಿತಿ ಅಧ್ಯಕ್ಷ ವಿನೋದ ಬರಗಾಲೆ, ಉಪಾಧ್ಯಕ್ಷ ಅಜಿತ ನಾಂದ್ರೆ, ಡಾ. ಅಶೋಕ ಪಾಟೀಲ, ಸನ್ಮತಿ ಪಾಟೀಲ ಇವರು ಪಟ್ಟಣ ಪಂಚಾಯಿತಿಯ ಸದಸ್ಯರನ್ನು ಸನ್ಮಾನಿಸಿ ಪಟ್ಟಣದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿರಿಯೆಂದು ಕೇಳಿಕೊಂಡರು.

ಸನ್ಮತಿ ಶಿಕ್ಷಣ ಸಮಿತಿಯ ನಿರ್ದೇಶಕರಾದ ಎಂ.ಎಸ್.ಪಾಟೀಲ, ಅಶ್ವಥ ಪಾಟೀಲ, ಆರ್.ವಿ.ಸಂಗೋರಾಮ, ಕುಮಾರ ಮಾಲಗಾಂವೆ, ಅಕ್ಕಾತಾಯಿ ಮುಜಾವರ, ಸುನಿತಾ ಮಾಕನ್ನವರ, ನೇಮಗೌಡ ಪಾಟೀಲ, ರಾಜು ಘೇನ್ನಾಪ್ಪಗೊಳ, ಅಣ್ಣಾಸಾಹೇಬ ಹಂಡಗೆ, ಯಶ್ವಂತ ಜಾಧವ, ಪ.ಪಂ ಸಿಇಓ ಸತೀಶ ಪಾಟೀಲ, ಮುಖ್ಯಾಧ್ಯಾಪಿಕೆ ಶ್ರೀಮತಿ ಎಂ.ಎನ್.ಕಾಳೆನಟ್ಟಿ, ಸೇರಿದಂತೆ ಎಲ್ಲ ಶಿಕ್ಷಕರು ಪಾಲ್ಗೊಂಡಿದ್ದರು. ಶಿಕ್ಷಕರಾದ ಎಚ್.ಪಿ.ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ಎ.ಕೆ.ಪಾಟೀಲ ವಂದಿಸಿದರು.

ಸುಕುಮಾರ ಬನ್ನೂರೆ,

ಇನ್ ನ್ಯೂಸ್, ಕಾಗವಾಡ.

Tags:

error: Content is protected !!