ನವರಾತ್ರಿ ಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮಹಾರಾಷ್ಟ್ರ ರಾಜ್ಯದ ಕುಲದೇವತೆ ಕರ್ನಾಟಕ ರಾಜ್ಯದಲ್ಲಿ ಕೋಟ್ಯಂತರ ಭಕ್ತರ ಹೊಂದಿರುವ ನೆರೆಯ ರಾಜ್ಯ ಮಹಾರಾಷ್ಟ್ರ ರಾಜ್ಯದ ಉಸ್ಮಾನಬಾದ ಜಿಲ್ಲೆಯ ಶಕ್ತಿಪೀಠ ತುಳಜಾಪುರದಲ್ಲಿ ನವರಾತ್ರಿಯ ಸಡಗರಕ್ಕೆ ಸಿದ್ದತೆಗಳು ಭಾರಿ ಜೋರಿನಿಂದ ನಡೆದಿವೆ. ನಿನ್ನೆ ಮಂಗಳವಾರ ರಾತ್ರಿ ಜಗದಂಬೆ ಗಾಢನಿದ್ರೆಗೆ ಜಾರಿದ್ದು ದೇವಸ್ಥಾನದ ಸಿಬ್ಬಂದಿ ಜಯಘೋಷ ಹಾಗೂ ವಿಶೇಷ ಪೂಜೆ ಸಲ್ಲಿಸಿ ತಾಯಿ ತುಳಜಾ ಭವಾನಿಯನ್ನು ಭಂಡಾರ ಹಾರಿಸುತ್ತಾ ಕೋಪ ಶಮನ ಗೊಳಿಸುತ್ತಾ ಮಂದಿರದಲ್ಲಿ ಇರುವ ಶಯನ ಕೋಣೆಗೆ ಮೂರ್ತಿಯನ್ನು ಸ್ಥಳಾಂತರಿಸಿದರು.
ಇನ್ನೂ ನವರಾತ್ರಿ ಮಹೋತ್ಸವ ಅಕ್ಟೋಬರ್ 3 ರಂದು ಪ್ರಾರಂಭವಾಗಲಿದೆ. ಅಲ್ಲಿಯವರೆಗೆ ಅಂದರೆ 9 ದಿನಗಳ ಕಾಲ ದೇವಿ ಗಾಢನಿದ್ರೆಗೆ ಜಾರಲಿದ್ದಾಳೆ. ಈಗ ಕೇವಲ ಜಗನ್ಮಾತೆ ಮುಖದರ್ಶನ ಹಾಗೂ ಸಿಂಹಾಸನ ದರ್ಶನ ಮಾತ್ರ ಸಿಗಲಿದೆ. ವಿಜಯ ದಶಮಿಯಂದು ರಾತ್ರಿ ಮತ್ತೆ ವಿಶ್ರಾಂತಿ ನಿದ್ರೆಗೆ ಜಾರುವ ತಾಯಿಯು ಐದು ದಿನಗಳ ಕಾಲ ವಿಶ್ರಾಂತಿ ಪಡೆದು ಸೀಗೆ ಹುಣ್ಣುಮೆ ಅಂದರೆ ಅಕ್ಟೋಬರ್ 17 ರಂದು ಜಾಗೃತಳಾಗುತ್ತಾಳೆ. ಆ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶದ, ತೆಲಂಗಾಣ, ತಮಿಳುನಾಡು ಭಕ್ತರು ಪಾದಯಾತ್ರೆ ಮೂಲಕ ತಾಯಿಯ ದಿವ್ಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಇದೀಗ ತುಳಜಾಭವಾನಿ ದೇವಸ್ಥಾನದಲ್ಲಿ ಸಿಂಹಾಸನ ಪೂಜೆಗೆ ಬಾರಿ ಬೇಡಿಕೆ ಇರುತ್ತದೆ.