hubbali

ಹಿಂದೂ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ : ಪ್ರಮೋದ ಮುತಾಲಿಕ್ ಆಕ್ರೋಶ

Share

ಇಂದಿರಾ ಕ್ಯಾಂಟೀನ್…ಬಡವರ, ಶ್ರಮಿಕರ, ಕಾರ್ಮಿಕರ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಆರಂಭಿಸಿರುವ ಜನಪ್ರಿಯ ಯೋಜನೆ.. ಯೋಜನೆ ಆರಂಭದಿಂದಲೂ ಈ ಯೋಜನೆ ಒಂದಿಲ್ಲಾ ಒಂದು, ವಿವಾದಕ್ಕೆ ಕಾರಣವಾಗಿದೆ. ಈ ಕ್ಯಾಂಟೀನ್ ದಲಿತರ ಮತ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ವಾಣಿಜ್ಯ ನಗರಿಯಲ್ಲಿ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಭಾರಿ ವಿರೋಧ ವ್ಯಕ್ತವಾಗಿದೆ..

ಒಂದು ಕಡೆ ಕಾಮಗಾರಿ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್, ಮತ್ತೊಂದು ಕಡೆ ಹಿಂದೂಪರ ಸಂಘಗಳ ಆಕ್ರೋಶ, ಇನ್ನೊಂದೆಡೆ ಕ್ಯಾಂಟೀನ್ ಪಕ್ಕದಲ್ಲಿ ರುದ್ರಭೂಮಿ.. ಈ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿ ಮಂಟೂರು ರಸ್ತೆಯಲ್ಲಿ.. ಸತ್ಯ ಹರಿಶ್ಚಂದ್ರ ಕಾಲೋನಿಯ ಪಕ್ಕದಲ್ಲಿ ಸರ್ವೇ ನಂಬರ್ 212 ರಲ್ಲಿ ಸುಮಾರು ಏಂಟು ಎಕರೆಯಲ್ಲಿ ಹಿಂದುಗಳು ರುದ್ರಭೂಮಿಯಿದೆ. ದಲಿತ, ಹಿಂದೂಳಿದ ಹಾಗೂ ಹಿಂದೂ ಧರ್ಮದ ವಿವಿಧ ಸಮುದಾಯದಗಳ ಜನರನ್ನು ಇಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ.. ಆದರೆ ಅದ್ಯಾರೋ ಐಡಿಯಾ ಕೊಟ್ಟ್ರೋ ಗೊತ್ತಿಲ್ಲ.. ಸನ್ಮಾನದ ಕಾಂಪೌಂಡ್ ಗೋಡೆದು ರಾತ್ರೋರಾತ್ರಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದೆ. ಇದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ..

 

ಸತ್ಯ ಹರಿಶ್ಚಂದ್ರ ರೂದ್ರಭೂಮಿ ಅಭಿವೃದ್ಧಿ ಮತ್ತು ಹೋರಾಟ‌ ಸಮಿತಿ ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.. ಸ್ಥಳ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ತಮ್ಮ ಪ್ರತಿಷ್ಠೆಗಾಗಿ ರುದ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದ್ದು, ಅಧಿಕಾರಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ. ಈಗ ಈ ಹೋರಾಟಕ್ಕೆ ಹಿಂದೂಪರ ಸಂಘಟನೆಗಳು ಸಹ ಕೈ ಜೋಡಿಸಿದ್ದು, ರುದ್ರಭೂಮಿ ಹೋರಾಟ ತೀವ್ರತೆ ಪಡೆದುಕೊಂಡಿದೆ.. ಕಾಮಗಾರಿ ಸ್ಥಳಕ್ಕೆ ಸ್ವತಃ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಅಸಮಾಧಾನ ಹೊರಹಾಕಿದ್ದಾರೆ..ಅಬ್ಬಯ್ಯ ಅವರ ದಲಿತರ ವೋಟ್ ಮೇಲೆ ಗೆದ್ದಿದ್ದಾರೆ. ಆದ್ರೆ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ.ಇವತ್ತು ಇಂದಿರಾ ಕ್ಯಾಂಟಿನ್, ನಾಳೆ ಅಬ್ಬಯ್ಯ ಕ್ಯಾಂಟಿನ್ ಕಟ್ಟತ್ತಾರೆ..ಹಿಂದೂ ರುದ್ರ ಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟುವ ಬದಲು, ನಿಮಗೆ ತಾಕತ್ತಿದ್ದ್ರೆ,ಮುಸ್ಲಿಂ ಕಬರಸ್ತಾನದಲ್ಲಿ ಕ್ಯಾಂಟಿನ್ ಕಟ್ಟಿ.ಕೂಡಲೇ ಇಂದಿರಾ ಕ್ಯಾಂಟಿನ್ ಕಟ್ಟಡ ಸ್ಥಳಾಂತರ ಮಾಡಿ.. ಇಲ್ಲದಿದ್ದರೆ ಉಗ್ರ ಹೋರಾಟ ಮೂಲಕ ನಾವೇ ತೆರವು ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ..

ಒಟ್ಟಿನಲ್ಲಿ ಬಡವರ ಹೊಟ್ಟೆ ತುಂಬಿಸಿ ಹೆಸರಾಗಬೇಕಿದ್ದ ಇಂದಿರಾ ಕ್ಯಾಂಟೀನ್, ಸ್ಮಶಾನದಲ್ಲಿ ನಿರ್ಮಾಣವಾಗುವ ಮೂಲಕ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಜನರ ವಿರೋಧದ ನಡುವೆಯೂ ಕಾಮಗಾರಿ ನಡೆಯುತ್ತಿರುವುದು ಯಾರ ಹಿತಾಸಕ್ತಿಗಾಗಿ ಎನ್ನುವ ಹಲವಾರು ಅನುಮಾನಕ್ಕೆ ಕಾರಣವಾಗಿದೆ..

Tags:

error: Content is protected !!