ಓಕೆನೋವಾ ಎಲೆಕ್ಟ್ರಾನಿಕ್ ಬೈಕ್ ಬ್ಯಾಟರಿ ಹೊತ್ತಿ ಉರಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಇಂದಿರಾನಗರದಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಬಾಳಪ್ಪಾ ಕೆಂಪಣ್ಣಾ ಕೂಕನೂರೆ ಎಂಬುವರಿಗೆ ಸೇರಿದ ಬೈಕ್ ಇದಾಗಿದೆ. ಬೈಕನಲ್ಲಿ ಬ್ಯಾಟರಿ ಚಾರ್ಜ ಮಾಡಿದ ಬಳಿಕ ಬ್ಯಾಟರಿಯಿಂದ ವಾಸನೆ ಬರಲು ಪ್ರಾರಂಭಿಸಿತು. ಕೂಡಲೇ ಬೈಕ್ ಮಾಲೀಕ ಬ್ಯಾಟರಿಯನ್ನು ಹೊರಗಡೆ ತೆಗೆದಾಗ ೧೦ ಸೆಕೆಂಡ್ ಬಳಿಕ ಬ್ಯಾಟರಿ ಹೊತ್ತಿ ಉರಿದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ,ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.