ಚಿಕ್ಕೋಡಿ : ಅಪರಾಧಗಳನ್ನು ತಡೆಯಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯತಂತ್ರಗಳನ್ನು ಮಾಡುತ್ತಿದ್ರೂ ನಿರೀಕ್ಷಿತ ಮಟ್ಟಿಗೆ ಯಶಸ್ಸು ಸಾಧಿಸುವುದು ಕಷ್ಟಸಾಧ್ಯಗಿದೆ. ಅಂತದ್ರಲ್ಲಿ ಇಲ್ಲಿ ನಿತ್ಯ ಸಾವಿರ ವಾಹನ ಸವಾರರು ಓಡಾಡು ಪ್ರದೇಶದಲ್ಲಿ ಅಕ್ರಮವಾಗಿ ಮಾರಕಾಸ್ತ್ರಗಳ ಮಾರಾಟ ದಂದೇ ಜೋರಾಗಿಯೇ ನಡೆಯುತ್ತಿದ್ದು ಇಲ್ಲಿಯ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ – 4 ರಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚಾರ ಮಾಡುತ್ತವೆ. ಇನ್ನು ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು, ಸುತ್ತ ಮುತ್ತಲಿನ ಹಳ್ಳಿಯ ಜನರು ಪ್ರತಿ ದಿನ ಪಟ್ಟಣಕ್ಕೆ ವ್ಯಾಪಾರ ವಹಿವಾಟಿಗೆ ಆಗಮಿಸುವ ಪ್ರದೇಶ ಬೇರೆ. ಹಾಗಿದ್ರೂ ಇಲ್ಲಿಯ NH – 4 ಹೆದ್ದಾರಿಯ ಪಕ್ಕದಲ್ಲೇ ರಾಜಾರೋಷವಾಗಿ ಚಾಕು, ಮಚ್ಚು, ಲಾಂಗ್ ಸೇರಿದಂತೆ ಅಕ್ರಮ ಮಾರಕಾಸ್ತ್ರಗಳ ಮಾರಾಟ ದಂಧೆ ಜೋರಾಗಿಯೇ ನಡಿತಾಯಿದೆ. ಆದ್ರೆ ಇಲ್ಲಿಯ ಸ್ಥಳೀಯ ಪೊಲೀಸರು ಮಾತ್ರ ಕಂಡು ಕಾಣದಂತೆ ಸುಮ್ಮನೆ ಉಳಿದಿದ್ದು ಅನುಮಾನಕ್ಕೆ ಕಾರಣವಾಗಿದೆ.
ಈಗಾಗಲೇ ದಿನೇ ದಿನೇ ಹೆಚ್ಚಾಗುತ್ತಿರುವ ಕೊಲೆ, ಸುಲಿಗೆಗಳಂತಹ ಅಪರಾಧಗಳಿಂದ ಜನ ಭಯ ಭೀತರಾಗಿದ್ದು ಇಂತಹ ಪ್ರದೇಶದಲ್ಲಿ ಓಡಾಡೋಕೆ ಜನ ಹೆದರುತ್ತಿದ್ದಾರೆ. ಅಂತದ್ರಲ್ಲಿ ಇಂತಹ ದಂಧೆಗಳಿಗೆಲ್ಲ ಕಡಿವಾಣ ಹಾಕಬೇಗಿದ್ದ ಪೊಲೀಸರೇ ಸುಮ್ಮನಾಗಿರೋದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಕೂಡಲೇ ಮೇಲಾಧಿಕಾರಿಗಳು ಇವರ ವಿರುದ್ಧ ಕ್ರಮ ಜರುಗಿಸಿ ಇಲ್ಲಿಯ ಸ್ಥಳೀಯ ಪೊಲೀಸರಿಗೆ ಎಚ್ಚರಿಕೆ ನೀಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.