Belagavi

“ಗುರು ವಂದನಾ – ಛಾತ್ರ ಅಭಿನಂದನೆ” ಕಾರ್ಯಕ್ರಮ”

Share

ಭಾರತ ವಿಕಾಸ ಪರಿಷತ್ ಆಯೋಜಿಸಿದ್ದ ‘ಗುರು ವಂದನಾ – ಛಾತ್ರ ಅಭಿನಂದನೆ’ ಕಾರ್ಯಕ್ರಮ ಚಿಂತಾಮನರಾವ್ ಶಾಲೆಯ ಭವ್ಯ ಸಭಾಂಗಣದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು. ಈ ವಿಶೇಷ ಕಾರ್ಯಕ್ರಮದಡಿಯಲ್ಲಿ ವಿವಿಧ ಶಾಲೆಗಳ 30 ಆದರ್ಶ ಶಿಕ್ಷಕರಿಗೆ ಪ್ರಶಸ್ತಿಪತ್ರ, ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ 60 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಾಸಕ ಅಭಯ ಪಾಟೀಲ ಉಪಸ್ಥಿತರಿದ್ದರು.

ಆರಂಭದಲ್ಲಿ ಅಕ್ಷತಾ ಮೋರೆ ಅವರು ಸಂಪೂರ್ಣ ವಂದೇ ಮಾತರಂ ಪ್ರಸ್ತುತಪಡಿಸಿದರು. ಗಣ್ಯರು ಭಾರತಮಾತೆ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸಿದರು. ಭಾರತ ವಿಕಾಸ ಪರಿಷತ್ತಿನ್ ಅಧ್ಯಕ್ಷ ವಿನಾಯಕ ಮೋರೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂತೀಯ ಅಧ್ಯಕ್ಷೆ ಸ್ವಾತಿ ಘೋಡೇಕರ್ ಪರಿಷತ್ತಿನ್ ರಾಷ್ಟ್ರೀಯ ಯೋಜನೆಗಳು, ಸಾಮಾಜಿಕ ಕಾರ್ಯಗಳು ಮತ್ತು ಮುಂಬರುವ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರೊ. ಅರುಣಾ ನಾಇಕ್ “ಗುರುವಂದನೆ” ಕಾರ್ಯಕ್ರಮದ ಪರಿಕಲ್ಪನೆಯನ್ನು ವಿವರಿಸಿದರು. ಸುಹಾಸ್ ಗುರ್ಜರ್ ಅತಿಥಿಗಳನ್ನು ಪರಿಚಯಿಸಿದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಭಾರತ ವಿಕಾಸ ಪರಿಷತ್ತಿನ ನಿಸ್ವಾರ್ಥ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸೇವಾ

ಕಾರ್ಯಗಳನ್ನು ಶ್ಲಾಘಿಸಿ ಮುಂದಿನ ಮಾದರಿ ಕಾರ್ಯಗಳಿಗೆ ಮನಃಪೂರ್ವಕ ಶುಭ ಹಾರೈಸಿದರು. ಬಳಿಕ ಆದರ್ಶ ಶಿಕ್ಷಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು. ಸುಖದ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು. ಶುಭಾಂಗಿ ಮಿರಾಶಿ ಕಾರ್ಯಕ್ರಮ ಸಂಯೋಜಿಸಿದರು. ಜಯಾ ನಾಯಕ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ನಗರದ ಎಲ್ಲಾ ಪ್ರಮುಖ ಶಾಲೆಗಳು ಇದರಲ್ಲಿ ಭಾಗವಹಿಸಿದ್ದವು. ಇದರಲ್ಲಿ ಕೆ. ಎಲ್. ಎಸ್. ಶಾಲೆ, ಸರ್ದಾರ್ ಪ್ರೌಢಶಾಲೆ, ಸರಸ್ವತಿ ಪ್ರೌಢಶಾಲೆ, ಚಿಂತಾಮನರಾವ್ ಪ್ರೌಢಶಾಲೆ, ಲವ್ ಡೇಲ್ ಸೆಂಟ್ರಲ್ ಶಾಲೆ, ಜಿ. ಜಿ. ಚಿಟ್ನಿಸ್ ಶಾಲೆ,

ಬಿ. ಕೆ. ಮಾದರಿ ಪ್ರೌಢಶಾಲೆ, ಉಷಾತಾಯಿ ಗೋಗಟೆ ಪ್ರೌಢಶಾಲೆ, ವಿ. ಎಂ. ಶಾನಭಾಗ ಪ್ರೌಢಶಾಲೆ, ಎಂ. ಆರ್. ಭಂಡಾರಿ ಶಾಲೆ, ಸ್ವಾಧ್ಯಾಯ ವಿದ್ಯಾಮಂದಿರ, ಸಂಗೋಳಿ ರಾಯಣ್ಣ ಪ್ರೌಢಶಾಲೆ, ಅಮೃತ ವಿದ್ಯಾಲಯ, ಮಹೇಶ್ವರಿ ಅಂಧಶಾಲಾ, ಲಿಟಲ್ ಸ್ಕಾಲರ್ಸ್ ಪ್ರೌಢಶಾಲೆ, ಮುಕ್ತಾಂಗನ ವಿದ್ಯಾಲಯ, ಭಾರತೀಯ ವಿದ್ಯಾಭವನ ಶಾಲೆ, ಕಂಟೋನ್ಮೆಂಟ್ ಬೋರ್ಡ್ ಶಾಲೆ, ಜ್ಞಾನ ಪ್ರಬೋಧನ ಮಂದಿರ ವಿದ್ಯಾಲಯ, ಬಾಲಿಕಾದರ್ಶ ವಿದ್ಯಾಲಯ, ಟಿಲಕವಾಡಿ ಪ್ರೌಢಶಾಲೆ, ಎಂ. ವಿ. ಹೆರ್ವಾಡ್ಕರ್ ಶಾಲೆ, ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ, ಮಹಿಳಾ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ,

ಮಹಿಳಾ ವಿದ್ಯಾಲಯ ಮರಾಠಿ ಮಾಧ್ಯಮ ಪ್ರೌಢಶಾಲೆ, ಭರತೇಶ ಆಂಗ್ಲ ಮಾಧ್ಯಮ ಶಾಲೆ, ಗೊಮಟೇಶ ಮರಾಠಿ ಮಾಧ್ಯಮ ಪ್ರೌಢಶಾಲೆ, ಜೋಶಿ ಸೆಂಟ್ರಲ್ ಶಾಲೆ, ಜ್ಞಾನ ಮಂದಿರ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಭಾರತ ವಿಕಾಸ ಪರಿಷತ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಪಾಂಡುರಂಗ ನಾಯಕ, ಕಾರ್ಯದರ್ಶಿ ಕೆ. ವಿ. ಪ್ರಭು, ಡಿ. ವೈ. ಪಾಟೀಲ, ಪ್ರಾಚಾರ್ಯ ವಿ. ಎನ್. ಜೋಶಿ, ಡಾ. ಜೆ. ಜಿ. ನಾಇಕ್, ಎನ್. ಬಿ. ದೇಶಪಾಂಡೆ, ವಿನಾಯಕ ಘೋಡೇಕರ್, ಸುಭಾಷ್ ಮಿರಾಶಿ, ಸುಹಾಸ್ ಗುರ್ಜರ್, ವಿಜೇಂದ್ರ ಗುಡಿ, ಕ್ಯಾಪ್ಟನ್ ಪ್ರಾಣೇಶ್ ಕುಲಕರ್ಣಿ,

ಚಂದ್ರಶೇಖರ್ ಇಟಿ, ಪಿ. ಎಂ. ಪಾಟೀಲ, ಗಣಪತಿ ಭುಜಗುರವ, ವಿಜಯ ಹಿದ್ದುಗ್ಗಿ, ಪಿ. ಜೆ. ಘಾಡಿ, ಅಡ್ವ. ಸಚಿನ್ ಜವಳಿ, ವಿದ್ಯಾ ಇಟಿ, ಪ್ರಿಯಾ ಪಾಟೀಲ್, ಜ್ಯೋತಿ ಪ್ರಭು, ಜ್ಯೋತ್ಸ್ನಾ ಗಿಲಬಿಲೆ, ನಿಮಂತ್ರಿತರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Tags:

error: Content is protected !!