gokak

ಮಹಾಲಕ್ಷ್ಮೀ ಕೋ-ಆಪ್ ಬ್ಯಾಂಕ್ ಅವ್ಯವಹಾರ; ಗ್ರಾಹಕರಿಗೆ ಹಣ ಕೊಡಿಸಲು ಪ್ರಾಮಾಣಿಕ ಪ್ರಯತ್ನ; ಶಾಸಕ ರಮೇಶ ಜಾರಕಿಹೊಳಿ

Share

ಆರ್.ಬಿ.ಐ. ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿಗಳ ಪ್ರಕಾರ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಮೋಸಹೋದ ಬಡವರ ಹಣವನ್ನು ಮರಳಿ ಕೊಡಿಸುವ ಪ್ರಾಮಾಣಿಕ ಕಾರ್ಯ ಮಾಡುತ್ತೇನೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಶನಿವಾರದಂದು ಗೋಕಾಕ್ ನಗರದ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ಇಲ್ಲಿನ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನಿಂದ 74.86 ಕೋಟಿ ರೂ ಸಾಲ ಪಡೆದು ಮರಳಿಸದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬ್ಯಾಂಕ್ ವತಿಯಿಂದ ಮೋಸ ಆದ ನಂತರ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೂಡಿ ಸಭೆ ಮಾಡಿ ಬಡವರಿಗೆ ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡುತ್ತಿರುವುದು ರಾಜ್ಯದಲ್ಲಿ ಇದೆ ಮೊದಲು. ಮೋಸ ಆದ ನಂತರ ಬ್ಯಾಂಕ್ ಆಡಳಿತ ಮಂಡಳಿಯವರು ಫರಾರಿ ಆಗುತ್ತಾರೆ. ಆದರೆ ಅಧಿಕಾರಿಗಳು ಮತ್ತು ನಾನು ಕೂಡಿ ಸಭೆ ಮಾಡಿ ಬಡವರಿಗೆ ನ್ಯಾಯ ದೊರೆಕಿಸಿ ಕೋಡುತ್ತೇವೆ. ಮಹಾಲಕ್ಷ್ಮಿ ಬ್ಯಾಂಕ್ ನ ಪ್ರಕರಣದಲ್ಲಿ ನಾವು ಜನರಿಗೆ ಮೋಸ ಮಾಡಲು ಬಿಡುವುದಿಲ್ಲ‌ ಎಂದರು.

ಬಾಳಾಸಾಹೇಬ ಮಾಂಗಲೇಕರ ಅವರು ಬಹಳ ಕಷ್ಟಪಟ್ಟು ಇದನ್ನು ಕಟ್ಟಿದ್ದಾರೆ. ಆಡಳಿತ ಮಂಡಳಿ ಈ ಹಗರಣದಲ್ಲಿ ಶಾಮೀಲು ಇಲ್ಲ. ಪೊಲೀಸರು ಹಂತ ಹಂತವಾಗಿ. ತನಿಖೆ ನಡೆಯಿಸಿ ಈ ಪ್ರಕರಣವನ್ನುಸರಿಪಡಿಸುತ್ತಾರೆ. ನನ್ನ ಮೇಲೆ ನಂಬಿಕೆ ಇಟ್ಟು ನನ್ನಗೆ ಸಹಕಾರ ನೀಡಿ, ಮುಂಬರುವ 3 ರಿಂದ 6 ತಿಂಗಳ ವರೆಗೆ ಇದನ್ನು ಸರಿಪಡಿಸುತ್ತೇನೆ. ಯಾರು ಹಗರಣ ಮಾಡಿದ್ದಾರೆ ಅವರ ಆಸ್ತಿ ಹರಾಜು ಮಾಡಿ ನಿಮ್ಮ ಹಣವನ್ನು ವಾಪಸ್ ಮಡುತ್ತೇವೆ ನನ್ನ ಹಿರಿಯ ಮಗನ ಹಣ ಸಹ ಇದೆ ಬ್ಯಾಂಕ್ ನಲ್ಲಿ ಇವೆ. ಆತುರ ಪಡದೆ ನಮಗೆ ಸಹಕಾರಿ ನೀಡಿ ಮತ್ತೆ ಗೋಕಾಕದಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ತಲೆ ಎತ್ತಿ ನಿಲ್ಲಬೇಕು. ಬ್ಯಾಂಕ್ ಉಳಿಯಬೇಕು ನಿಮ್ಮ ಹಣ ಮತ್ತು ನೀವು ಸಹ ಉಳಿಯಬೇಕು ಕೆಲವರು ಅದಕ್ಕೆ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಾರೆ. ಅದಕ್ಕೆ ಗ್ರಾಹಕರು ತೆಲೆ ಕೊಡದೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ‌.ಮೋಹನ ಭಸ್ಮೆ, ಸಿಪಿಐ ಗೋಪಾಲ ರಾಠೋಡ, ಪಿಎಸ್ಐ ಕೆ.ವಾಲಿಕರ ಉಪಸ್ಥಿತರಿದ್ದರು.

Tags:

error: Content is protected !!