gokak

ಮಹಾಲಕ್ಷ್ಮೀ ಕೋ-ಆಪ್.ಬ್ಯಾಂಕಿನಲ್ಲಿ ₹74.87 ಕೋಟಿ ಅವ್ಯವಹಾರ !!!

Share

ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಕೋ-ಆಪರೇಟಿವ್ ಬ್ಯಾಂಕಿನ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಗೋಕಾಕ ಪಟ್ಟಣದ ಮಹಾಲಕ್ಷ್ಮಿ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕಿನಲ್ಲಿ ₹74.87 ಕೋಟಿ ಅವ್ಯವಹಾರ ನಡೆದಿದ್ದು, ಒಂದೆಡೇ ಠೇವಣಿದಾರರು ಆತಂಕಕ್ಕೊಳಗಾದರೇ ಇನ್ನೊಂದಡೆ ಪೊಲೀಸ್ ಇಲಾಖೆ ತನಿಖೆಗಾಗಿ ಸರ್ಕಾರಕ್ಕೆ ಪತ್ರ ಬರೆದಿದೆ. ಮತ್ತೋಂದೆಡೆ ಬ್ಯಾಂಕ್ ವ್ಯವಸ್ಥಾಪಕರು ಯಾರೂ ಭಯ ಪಡುವ ಅಗತ್ಯವಿಲ್ಲ. ನಿಮ್ಮ ಹಣ ಮರಳಿ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಮತ್ತೋಂದು ಕೋ ಆಪ್ ಕ್ರೇಡಿಟ್ ಬ್ಯಾಂಕಿನ ಅವ್ಯವಹಾರ ಬೆಳಕಿಗೆ ಬಂದಿದೆ. ಗೋಕಾಕ ಪಟ್ಟಣದ ಮಹಾಲಕ್ಷ್ಮೀ ಮಹಾಲಕ್ಷ್ಮಿ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕಿನಲ್ಲಿ ₹74.87 ಕೋಟಿ ವಂಚನೆ ನಡೆದಿದೆ. ಸಿಬ್ಬಂದಿಯಿಂದಲೇ ಕೋಟ್ಯಂತರ ರೂ. ಲಪಟಾಯಿಸಿದ ಆರೋಪ ಕೇಳಿ ಬಂದಿದ್ದು, ಗೋಕಾಕ ನಗರದ ಗುರುವಾರ ಪೇಟೆಯಲ್ಲಿರುವ ಬ್ಯಾಂಕನ ವಿರುದ್ಧ ಠೇವಣಿದಾರರು ದೂರು ದಾಖಲಿಸಿದ್ದಾರೆ. ಫಿಕ್ಸ್ ಡೆಪಾಸಿಟ್ ಮಾಡಿದ ಹಣ ಮೇಲೆ ಸಿಸಿ ಮತ್ತು ಡೆಪಾಸಿಟ್ ಸಾಲ, ಪಿಗ್ಮಿ ಸಾಲ ಅಂತಾ ಪಡೆದು ಧೋಖಾ ಮಾಡಿದ್ದಾರೆ. ಸಾಲ ಪಡೆಯುವ ಮುನ್ನ 6 ಕೋಟಿ 90ಲಕ್ಷ ಡೆಪಾಸಿಟ್ ಮಾಡಿದ್ದ ಖದೀಮರು, ಇದೇ ಹಣದ ಮೇಲೆ ಬರೋಬ್ಬರಿ 74 ಕೋಟಿ ಸಾಲದ ರೂಪದಲ್ಲಿ ಹಣ ಪಡೆದಿದ್ದಾರೆ. 2021ರಿಂದ 2024ರ ವರೆಗೆ ಬ್ಯಾಂಕನ ಓರ್ವ ಸಿಬ್ಬಂದಿ ಸೇರಿದಂತೆ 14 ಜನರು ಹಣವನ್ನು ಲೂಟಿ ಹೊಡೆದಿದ್ದಾರೆ. ಇತ್ತ ಡೆಪಾಸಿಟ್ ಹಣವೂ ಇಲ್ಲ ಸಾಲ ಕೂಡ ಮರುಪಾವತಿ ಆಗದೇ ಬ್ಯಾಂಕ್ ಎದುರು ತಮ್ಮ ಠೇವಣಿ ಮೊತ್ತ ವಾಪಸ್ ನೀಡುವಂತೆ ಜನ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಇನ್ನೂ ಘಟನೆಯ ಕುರಿತು ಬೆಳಗಾವಿ ಎಸ್ಪಿ ಡಾ. ಭೀಮಾ ಶಂಕರ್ ಗುಳೇದ ಅವರು ಗೋಕಾಕ ಬ್ಯಾಂಕನ ಅಧ್ಯಕ್ಷ ಜೀತೆಂದ್ರ ಮಾಂಗಲೇಕರ ಅವರು ಈಗಾಗಲೇ ದೂರು ನೀಡಿದ್ದಾರೆ. ಮಹಾಲಕ್ಷ್ಮಿ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕ ಜಿಲ್ಲೆಯಲ್ಲಿ ಆರು ಶಾಖೆಗಳನ್ನು ಹೊಂದಿದೆ ,ಬೆಳಗಾವಿಯಲ್ಲಿ ಒಂದು ,ನಿಪ್ಪಾಣಿಯಲ್ಲಿ ಒಂದು ,ಚಿಕ್ಕೋಡಿಯಲ್ಲಿ ಒಂದು ,ಗೋಕಾಕ್ ನಲ್ಲಿ ಎರಡು ಶಾಖೆಗಳನ್ನು ಹೊಂದಿದೆ . ಈ ಪ್ರಕರಣದ ತನಿಖೆಗೆ ಈಗಾಗಲೇ 3 ತಂಡಗಳನ್ನು ರಚನೆ ಮಾಡಲಾಗಿದ್ದು, ಪ್ರಕರಣದ ತನಿಖೆಯ ಜವಾಬ್ದರಿಯನ್ನು ಸಿಐಡಿ ಗೆ ವಹಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ , ಠೇವಣಿದಾರರಿಗೆ ಶುಕ್ರವಾರ ಠಾಣೆಗೆ ಬರುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಇನ್ನು ಬ್ಯಾಂಕ್ ನ ಓರ್ವ ಸಿಬ್ಬಂದಿ ಹಾಗೂ ಆತನ ಸಂಬಂಧಿ ಸೇರಿದಂತೆ ಒಟ್ಟು 14 ಜನರ ವಿರುದ್ಧ ಬ್ಯಾಂಕ್ ಅಧ್ಯಕ್ಷನಿಂದ ದೂರು ನೀಡಲಾಗಿದೆ. ಯಾರ ಹಣವೂ ಎಲ್ಲಿಯೂ ಹೋಗಲ್ಲ, ನಿಮ್ಮ ಹಣ ಸೇಫಾಗಿದೆ. ಆರೋಪಿಗಳ ಪತ್ತೆ ಮಾಡಿ ಹಣವನ್ನು ಮರಳಿ ನೀಡುತ್ತೇವೆ , ಅಲ್ಲಿಯವರಗೆ ಯಾರೂ ಗಾಬರಿಯಾಗಬೇಡಿ ಎಂದು ಬ್ಯಾಂಕನ ಅಧ್ಯಕ್ಷ ಜೀತೆಂದ್ರ ಮಾಂಗಲೇಕರ ಲಿಖಿತ ಹೇಳಿಕೆಯನ್ನು ಜಾರಿಗೊಳಿಸಿದ್ದಾರೆ.

Tags:

error: Content is protected !!