ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಇಂದು ಮತ್ತೇ ಸುದ್ಧಿಯಲ್ಲಿದ್ದು, ಮಳೆಗಾಲದ ಅವಾಂತರದಿಂದ ರೋಗಿಗಳು ಆತಂಕಕ್ಕೊಳಗಾಗುವ ಪರಿಸ್ಥಿತಿ ಎದುರಾಗಿದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆ ಒಂದಿಲ್ಲೊಂದು ಕಾರಣಕ್ಕೆ ಸುದ್ಧಿಯಲ್ಲಿರುತ್ತದೆ. ಈಗ ತನ್ನ ಮತ್ತೊಂದು ಅವಾಂತರದಿಂದ ಸುದ್ಧಿಯಲ್ಲಿದೆ. ಬೆಳಗಾವಿಯಲ್ಲಿ ಮಳೆಗಾಲ ಆರಂಭವಾದರೇ ಸಾಕು ಬಿಮ್ಸ್ ಗೋಡೆಗಳಿಂದ ನೀರು ಚಿಮ್ಮಲು ಆರಂಭವಾಗಿ ಬಿಡುತ್ತದೆ. ಗೋಡೆಗಳ ಮೇಲೆ ಫಂಗಸ್ ಉಂಟಾಗಿ, ರೋಗಿಗಳಲ್ಲಿ ಭಯವನ್ನು ಮೂಡಿಸುತ್ತದೆ.
ಆಸ್ಪತ್ರೆಯ ಬೆಡಗಳಿಗೆ ಜೋಡಿಸಲಾದ ಆಕ್ಸಿಜನ್ ನಾಳಗಳು ಮತ್ತು ಔಷಧಿಗಳನ್ನು ಇದೇ ಫಂಗಸ್ ಇದ್ದ ಗೋಡೆಗಳ ಹತ್ತಿರ ಇಡಲಾಗಿದ್ದು, ರೋಗಿಗಳು ಒಂದು ಕ್ಷಣ ಚಿಂತಿಸುವಂತೆ ಮಾಡುತ್ತಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಬೇಕಾದ ಆಕ್ಸಿಜನ್ ಮತ್ತು ಔಷಧಿಗಳು ಈ ಫಂಗಸನಿಂದಾ ಹಾಳಾಗುವ ಸಾಧ್ಯತೆಯಿದೆ. ಬಡ ಮಧ್ಯಮ ವರ್ಗದ ಜನರು ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಆಗಮಿಸುತ್ತಾರೆ. ಆದರೇ ಇಲ್ಲಿನ ಈ ಪರಿಸ್ಥಿತಿ ಆತಂಕಕಾರಿಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಯನ್ನು ಹೊಗಲಾಡಿಸಲು ಕ್ರಮವಹಿಸಬೇಕಿದೆ ಎಂಬುದು ರೋಗಿಗಳ ಆಗ್ರಹವಾಗಿದೆ.