ಹುಕ್ಕೇರಿ : ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಉತ್ತವಾಗಿದ್ದರೆ ಮಾತ್ರ ಕುಟುಂಬ ನೆಮ್ಮದಿಯಿಂದ ಬದುಕಬಹುದು ಎಂದು ಹುಕ್ಕೇರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಎಚ್ ಹೋಳೆಪ್ಪ ಹೇಳಿದರು.
ಅವರು ಇಂದು ಹುಕ್ಕೇರಿ ತಾಲೂಕಿನ ಹೋನ್ನಿಹಳ್ಳಿ ಗ್ರಾಮದಲ್ಲಿ ಪೋಷನ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಗಡಿಭಾಗದ ಕಟ್ಟ ಕಡೆಯ ಗ್ರಾಮ ಬೂಗಟಿ ಆಲೂರ ವಲಯ ಮಟ್ಟದ ಅಂಗನವಾಡಿ ಶಾಲೆಗಳ ಮಕ್ಕಳು ಸರ್ಕಾರದ ಯೋಜನೆಗಳನ್ನು ರೂಪಕದ ಮುಖಾಂತರ ಪ್ರದರ್ಶನ ಹಾಗೂ ಬಾನಂತಿಯರಿಗೆ ಉಡಿ ತುಂಬುವದು ಮತ್ತು ಪೌಷ್ಟಿಕ ಆಹಾರ ಪ್ರದರ್ಶನ ಅವುಗಳ ಉಪಯೋಗ ಕುರಿತು ಅತ್ತೆ ಸೋಸೆಯಂದಿರಿಗೆ ತಿಳುವಳಿಕೆಗಳು ಜರುಗಿದವು.
ವೇದಿಕೆ ಮೇಲೆ ಗ್ರಾಮ ಪಂಚಾಯತಿ ಅದ್ಯಕ್ಷರಾದ ಸುನಂದಾ ಮಠಪತಿ, ಪಿ ಡಿ ಪಾಟೀಲ, ವಲಯ ಮೇಲ್ವಿಚಾರಕರಾದ ಪ್ರೇಮಿಳಾ ಚೌಗಲೆ, ರುಕ್ಮಿಣಿ ಪಾಟೀಲ, ಸುರೇಖಾ ಪಾಟೀಲ, ಗೀತಾ ಕಾಂಬಳೆ, ಸುರೇಖಾ ನಾಯಿಕ ಉಪಸ್ಥಿತರಿದ್ದರು. ನಂತರ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಂದ ಯಕ್ಷಗಾಣ ನೃತ್ಯ , ಭರತನಾಟ್ಯ ಮತ್ತು ಚಿಕ್ಕ ಮಕ್ಕಳ ಹುಟ್ಟು ಹಬ್ಬ, ಅನ್ನ ಪ್ರಾಶಾನ ಗರ್ಭಿಣಿ ಮಹಿಳೆಯರಿಗೆ ಶಿಮಂತ ,ರಂಗೋಲಿ ಸ್ಪರ್ಧೆಗಳು ಅಚ್ಚು ಕಟ್ಟಾಗಿ ಏರ್ಪಡಿಸಲಾಗಿತ್ತು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಹೋಳೆಪ್ಪ ಎಚ್ ಮಾತನಾಡಿ ಹುಕ್ಕೇರಿ ತಾಲೂಕಿನ ಗಡಿ ಭಾಗದ ಸುಮಾರಿ ಏಳು ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರದ ಯೋಜನೆ ಮತ್ತು ಅವುಗಳ ಉಪಯೋಗ ಕುರಿತು ಪೋಷಕರಿಗೆ ಅರಿವು ಮುಡಿಸುವ ಪೋಷನ ಅಭಿಯಾನ ಹಮ್ಮಿಕೊಳ್ಳಲಾಗಿತ್ತು ಇದರ ಪ್ರಯೋಜನ ಪ್ರತಿಯೊಬ್ಬರು ಪಡೆದುಕೊಳ್ಳ ಬೇಕು ಎಂದರು
ಈ ಸಂದರ್ಭದಲ್ಲಿ ಉಮಾ ಕೋಟಬಾಗಿ, ಶಬ್ಬಿರ ಮಕಾನದಾರ, ವಿಜಯ ಶೇರೆಕರ, ಶಿಕ್ಷಕರಾದ ಆರ್ ಬಿ ಪತ್ತಾರ, ಬಿ ಎಮ್ ವಾಗರೆ, ರೇಖಾ ದಂಡವತೆ ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.