Belagavi

ಈದ್ ಮಿಲಾದ್ ಮೆರವಣಿಗೆಯ ನಂತರ ತಲ್ವಾರ್ ನಿಂದ ಹೊಡೆದಾಟ – ನಾಲ್ವರಿಗೆ ಗಾಯ !

Share

ಬೆಳಗಾವಿಯಲ್ಲಿ ಈದ್ ಮಿಲಾದ್ ಮೆರವಣಿಗೆಯ ನಂತರ ಕೆಲ ಯುವಕರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದು, ತಲ್ವಾರ್ ನಿಂದ ಹೊಡೆದಾಡಿಕೊಂಡಿದ್ದಾರೆ.

ಬೆಳಗಾವಿಯ ರುಕ್ಕಿಣಿ ನಗರ ಹಾಗೂ ಉಜ್ವಲ್ ನಗರದ ಯುವಕರ ಮಧ್ಯೆ ಗಲಾಟೆ ಆಗಿದ್ದು, ಮೆರವಣಿಗೆ ಮುಗಿಸಿಕೊಂಡು ವಾಪಸ್ ಬರುವ ವೇಳೆ
ವಿದ್ಯುತ್ ದೀಪ ಹಾನಿ ವಿಚಾರಕ್ಕೆ ಮಾರಾಮಾರಿ ನಡೆದಿದೆ , ಸಮೀರ್ ನೇತೃತ್ವದ ಗುಂಪು ಅಳವಡಿಸಿದ್ದ ವಿದ್ಯುತ್ ದೀಪಕ್ಕೆ ಮಹ್ಮದ್ ಕೈಪ್ ಹಾಗೂ ಆತನ ಸ್ನೇಹಿತರು ಬೈಕ್ನಿಂದ ಗುದ್ದಿ ವಿದ್ಯುತ್ ದೀಪಗಳನ್ನು ಹಾನಿ ಹಾನಿಯಾದ ವಿದ್ಯುತ್ ದೀಪಗಳಿಗೆ ಪರಿಹಾರ ನೀಡುವಂತೆ ಸಮೀರ್ ತಂಡದ ಬೇಡಿಕೆ ಆಗ ಪರಸ್ಪರ ವಾಗ್ವಾದವಾಗಿ ಸಮೀರ್ ನೇತೃತ್ವದ ತಂಡದಿಂದ ತಲ್ವಾರನಿಂದ ಹಲ್ಲೆ
ಈ ಘಟನೆಯಲ್ಲಿ ಉಜ್ವಲ ನಗರದ ನಾಲ್ವರಿಗೆ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಮೊಹಮ್ಮದ್ ಕೈಫ್, ಸಾಹಿಲ್ ಬಂಡಾರೆ, ತನ್ವೀರ್, ಎಂದು ಗುರುತಿಸಲಾಗಿದೆ. ಸದ್ಯ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ..
ಈ ಪ್ರಕರಣದ ಸಂಬಂಧ ಮಾಳ ಮಾರುತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Tags:

ಈದ್ ಮಿಲಾದ್ ಮೆರವಣಿಗೆಯ ನಂತರ ತಲ್ವಾರ್ ನಿಂದ ಹೊಡೆದಾಟ – ನಾಲ್ವರ ಸ್ಥಿತಿ ಗಂಭೀರ.!
error: Content is protected !!