ಚನ್ನಮ್ಮನ ಕಿತ್ತೂರು ಪಟ್ಟಣದ ಸೋಮವಾರ ಪೇಟೆಯ ಬೆಲ್ಲದ ಓಣಿಯಲ್ಲಿರುವ ಎಂ ಎಸ್ ಆಯ್ ಎಲ್ ಮದ್ಯದ ಮಳಿಗೆಯನ್ನು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಪ್ರವೀಣ ಸರ್ದಾರ ಒತ್ತಾಯಿಸಿದ್ದಾರೆ .
ಕಿತ್ತೂರಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವೀಣ ಸರ್ದಾರ ಈ ಹಿಂದೆ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಮದ್ಯದಂಗಡಿಯನ್ನು ಸ್ಥಳಾಂತರ ಮಾಡುವಂತೆ ಮನವಿ ಸಲ್ಲಿಸಲಾಯಿತು, ಆದರೆ ಇನ್ನೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಯ ಮದ್ಯದ ಮಳಿಗೆಯ ಮುಂದೆ ಮಹಿಳೆಯರಿಗೆ, ವೃದ್ಧರು ಹಾಗೂ ಮಕ್ಕಳು ಓಡಾಡುತ್ತಾರೆ ಇದರಿಂದ ತೊಂದರೆ ಆಗುತ್ತಿದೆ. ಬರುವ 200 ನೇ ಕಿತ್ತೂರು ವಿಜಯೋತ್ಸವದ ಪೂರ್ವಬಾವಿ ಸಭೆ ಒಳಗಾಗಿ ಸ್ಥಳಾಂತರ ಮಾಡಬೇಕು ಇಲ್ಲವಾದರೆ ಪೂರ್ವಬಾವಿ ಸಭೆ ದಿನವೇ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.