ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಳಿ ಕೃಷ್ಣಾ ನದಿಯಲ್ಲಿ ಮುಳುಗಿ ಬಾಲವ್ಚ ಆರ್.ಕಮರಿ ಎಂಬ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶವ ಪತ್ತೆಯಾಗಿದೆ.
ಬಾಗಲಕೋಟ ಜಿಲ್ಲೆಯ ‘ಇಳಕಲ್ ತಾಲ್ಲೂಕಿನ ಚಟ್ಟಿಹಾಳ ಗ್ರಾಮದ ಬಾಲವ್ವ ಆರ್.ಕಮರಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದರು. ಎರಡು ದಿನಗಳ ಹಿಂದೆ ನದಿಗೆ ಜಿಗಿದಿದ್ದರು. ಅಗ್ನಿಶಾಮಕ ದಳದ ಸಹಯೋಗದೊಂದಿಗೆ ಶವವನ್ನು ಹೊರತೆಗೆಯಲಾಯಿತು. ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಪೋಷಕರು ಹೇಳಿದ್ದಾರೆ’ ಎಂದು ಮುದ್ದೇಬಿಹಾಳ ಠಾಣೆಯ ಪಿಎಸ್ಐ ಸಂಜಯ ತಿಪರೆಡ್ಡಿ ತಿಳಿಸಿದ್ದಾರೆ.