Banglore

ಶಾಸಕ ಮುನಿರತ್ನ ಆಡಿಯೋ ಪ್ರಕರಣದ ಬಗ್ಗೆ ನನಗೆ ತಿಳಿದೇ ಇಲ್ಲ – ಡಿಸಿಎಂ ಡಿಕೆ ಶಿವಕುಮಾರ್

Share

ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ಆಡಿಯೋ ಪ್ರಕರಣದ ಬಗ್ಗೆ ನನಗೆ ತಿಳಿದೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು

ಕಳೆದ ಕೆಲವು ದಿನಗಳಿಂದ ಯುಎಸ್ ಪ್ರವಾಸದಲ್ಲಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ಬಂಧನದ ಬಗ್ಗೆ ಪ್ರಶ್ನಿಸಿದ್ದಕ್ಕೆ ಡಿಕೆಶಿ ತಮ್ಮದೇ ಶೈಲಿಯಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಈ ವಿಚಾರದ ಬಗ್ಗೆ ನಂಗೆ ಸರಿಯಾದ ಮಾಹಿತಿ ಇಲ್ಲ. ಬಿಜೆಪಿ ಇದೆ, ಆರ್.ಅಶೋಕ್ ಇದ್ದಾರೆ, ವಿಜಯೇಂದ್ರ ಇದ್ದಾರೆ. ಇನ್ನು ದೊಡ್ಡ ದೊಡ್ಡ ನಾಯಕರು ಇದ್ದಾರೆ, ಅವರು ಮಾತಾಡಬೇಕು. ಆ ಸಮುದಾಯದ ಮುಖ್ಯಸ್ಥರು, ಸ್ವಾಮೀಜಿಗಳು ಮಾತಾಡಬೇಕು, ಸರಿ ಅಂದ್ರೆ ಸರಿ, ತಪ್ಪು ಅಂದರೆ ತಪ್ಪು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು. ಇನ್ನು ಈ ಬಗ್ಗೆ ಇನ್ನಷ್ಟು ಮಾಹಿತಿ ತಗೊಂಡು ಮಾತಾಡ್ತಿನಿ ಎಂದು ಹೇಳಿದರು.

ಇನ್ನು ನಾಗಮಂಗಲ ಗಣೇಶ ಮೆರವಣಿಗೆ ಗಲಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಇದೆ ನೋಡಿಕೊಳ್ಳುತ್ತೆ, ಸರ್ಕಾರ ನಿಭಾಯಿಸುತ್ತೆ ಎಂದಷ್ಟೇ ಹೇಳಿ ನುಣುಚಿಕೊಂಡರು. ವಿದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಕೊಂಚ ಸಿಡಿಮಿಡಿಗೊಂಡಂತೆ ಕಂಡ ಡಿಸಿಎಂ, ನಮ್ ಪಾರ್ಟಿ, ನಮ್ಮ ಲೀಡರ್, ನನ್ನಿಷ್ಟ. ಭೇಟಿ ಮಾಡೋಕೆ ಯಾರ ಅನುಮತಿ ಕೇಳಬೇಕು. ನಾನು ಯಾರ್ ಹತ್ರ ಮಾತಾಡಬೇಕು, ಏನ್ ಮಾಡಬೇಕು ಎಲ್ಲವನ್ನು ನಿಮ್ಮ ಹತ್ರ ಹೇಳ್ಕೋಬೇಕಾ? ನನ್ ತಮ್ಮನ ಹತ್ರ ಏನ್ ಮಾತಾಡ್ತಿನಿ, ನನ್ ತಂಗಿ ಹತ್ರ, ಫ್ಯಾಮಿಲಿ ಹತ್ರ ಏನ್ ಮಾತಾಡ್ತಿನಿ ಎಲ್ಲವನ್ನೂ ಹೇಳಬೇಕಾ ಎಂದು ಮರು ಪ್ರಶ್ನೆ ಹಾಕಿದರು.

Tags:

error: Content is protected !!