Banglore

ಅಲ್ಪಸಂಖ್ಯಾತರ ತುಷ್ಟೀಕರಣದಿಂದಲೇ ರಾಜ್ಯದಲ್ಲಿ ಕೋಮು ಗಲಭೆ – ಜಗದೀಶ ಶೆಟ್ಟರ್

Share

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ , ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಯಿಂದಲೇ ಈ ರೀತಿ ಘಟನೆ ಆಗುತ್ತಿವೆ ಎಂದು ಕಾಂಗ್ರೆಸ್ ಸರ್ಕಾರ ವಿರುದ್ದ ಸಂಸದ ಜಗಧೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು .

ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ರಾಜ್ಯದಲ್ಲಿ ಅಲ್ಪಸಂಖ್ಯಾತರ ತುಷ್ಠಿಕರಣ ದಿಂದಲೇ ಪ್ಯಾಲೆಸ್ಟೇನೆ ಧ್ವಜ ಹಾಗೂ ಪಾಕಿಸ್ತಾನ ಧ್ವಜ ಹಾರಿಸುತ್ತಾರೆ , ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಯಿಂದಲೇ ಈ ರೀತಿ ಘಟನೆ ಆಗುತ್ತಿವೆ. ರಾಜ್ಯದಲ್ಲಿ ದಾವಣಗೇರೆ ಹಾಗೂ ನಾಗಮಂಗಲದ ಗಲಭೆಗೆ ಯಾರು ಪ್ರಚೋದನೆ ಕೊಟ್ಟರೋ, ಯಾರು ಕಲ್ಲು ಹೊಡೆದು ಹಾನಿ ಮಾಡಿದ್ದಾರೋ ಅವರ ರಕ್ಷಣೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ’ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಎಲ್ಲಾ ಈ ರೀತಿ ಘಟನೆಗಳು ಆಗುವುದು ಸಾಮಾನ್ಯ ವಿರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗದ ವೇಳೆಯೂ ರಾಮನಗರ , ದಾವಣಗೇರೆಯಲ್ಲಿ ಗಲ್ಲಾಟೆಗಳು ಆಗಿದ್ವೇವು ಎಂದು ಎಂದು ಸಂಸದ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು .

ತಿರುಪತಿ ಲಡ್ಡು ನಲ್ಲಿ ಪ್ರಾಣಿ ಮಾಂಸ ಪತ್ತೆಯಾಗಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಗಂಭೀರ ವಾಗಿದು , ಹಿಂದಿನ ಮುಖ್ಯ ಮಂತ್ರಿ ಜಗನ್ ಮೋಹನ್ ರೆಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದವರು , ಹಿಂದೂ ಧರ್ಮದವರಿಗೆ ಧೆಕ್ಕೆ ತರುವ ಕೆಲಸ ಆಗಿದ್ದುರು ಆಗಿರಬಹುದು ಈ ಸಂಪೂರ್ಣ ತನಿಖೆಯಾಗಿಬೇಕು , ಆರೋಪ ಸಾಬೀತುಯಾದರೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದರು .

ಕಾಂಗ್ರೆಸ್ ಸರ್ಕಾರ ದಿಂದ ದ್ವೇಷದ ರಾಜಕಾರಣ ಹೆಚ್ಚಿದೆ ಮುಡಾ ಹಗರಣ ಹೊರಗೆ ತಂದ ಮೇಲೆ , ದ್ವೇಷದ ರಾಜಕಾರಣ ಹೆಚ್ಚಿದೆ ,ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಮೇಲೆ ಡಿನೋಟಿಫಿಕೇಷನ್ 6 ಆರು ವರ್ಷಗಳು ಬೇಕಿತ್ತಾ ಸಿಎಂ ಸಿದ್ದರಾಮಯ್ಯನವರಿಗೆ ಎಂದು ವಾಗ್ದಾಳಿ ನಡೆಸಿದರು . ವಂದೇ ಭಾರತ್ ರೈಲ್ವೆ ಬೆಳಗಾವಿಗೆ ತರುವ ಬಗ್ಗೆ ಹಾಗೂ ಬೆಳಗಾವಿ ಧಾರವಾಡ ನೇರ ರೈಲ್ವೆ ಕಾಮಗಾರಿ ಕೇಂದ್ರ ರೈಲ್ವೇ ಸಚಿವರ ನೊಂದಿಗೆ ಚರ್ಚೆ ಮಾಡಲಾಗಿದೆ ಸೆ.23 ರಂದು ಮೀಟಿಂಗ್ ಇದೆ ರಾಜ್ಯ ರೈಲ್ವೇ ಸಚಿವ ವಿ ಸೋಮಣ್ಣ ವರು ಹುಬ್ಬಳ್ಳಿಗೆ ಬರುತ್ತಾರೆ ಎಂದು ತಿಳಿಸಿದರು .

ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮವನ್ನು ಸ್ವಾಗತಿಸುತ್ತೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭೆ, ಲೋಕಸಭೆ ಹೀಗೆ ಒಂದೊಂದು ಚುನಾವಣೆ ಒಮ್ಮೊಮ್ಮೆ ನಡೆದಾಗ ನೀತಿ ಸಂಹಿತೆ ಜಾರಿಯಾಗುತ್ತದೆ. ಇದರಿಂದಾಗಿ ಕಾಮಗಾರಿಗಳು ವಿಳಂಬವಾಗಿ ಸರ್ಕಾರ ಯಾವುದೇ ಯೋಜನೆಯನ್ನು ಸರಿಯಾಗಿ ಜಾರಿ ಮಾಡಲು ಸಾಧ್ಯವಾಗುವುದಿಲ್ಲ. ಹೊಸ ಕ್ರಮದಿಂದ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದ್ದರು .

Tags:

error: Content is protected !!