arrest

ಮೀಟರ್ ಬಡ್ಡಿ ದಂಧೆಕೋರರ ಚಳಿ ಬಿಡಿಸಿದ ಕಮಿಷನರ್ ಶಶಿಕುಮಾರ್;ಒಂದೇ ದಿನ 13 ಪ್ರಕರಣ 23 ಜನ ಅರೆಸ್ಟ್

Share

ಅವಳಿ ನಗರದಲ್ಲಿ ನಡೆಯುತ್ತಿರೋ ಮೀಟರ್ ಬಡ್ಡಿ ದಂದೇ ತಡೆಗಟ್ಟುವ ನಿಟ್ಟಿನಲ್ಲಿ ಇದೀಗ ಕಮಿಷನರ್ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದ್ದು ಅವಳಿ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಮೀಟರ್ ಬಡ್ಡಿ ದಂದೇ ನಡೆಸುತ್ತಿದ್ದ ಆರೋಪದ ಮೇಲೆ 16 ಪ್ರಕರಣಗಳಲ್ಲಿ 23 ಜನರ ಸಹಿತ ಒಂದು ಕಾರು,2ಬೈಕ್,ಖಾಲಿ ಚೆಕ್ ಹಾಗೂ ಬಾಂಡ್ ಗಳನ್ನು ವಶಕ್ಕೇ ಪಡೆದು ಪ್ರಕರಣ ದಾಖಲು ಮಾಡಲಾಗಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ಮೀಟರ್ ಬಡ್ಡಿ ದಂದೇಗಳ ಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಈ ಘಟನೆ ಮಾಸುವ ಮುನ್ನವೇ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಗೇರಿಯ ಚೇತನಾ ಕಾಲೋನಿಯಲ್ಲಿ ಮೀಟರ್ ಬಡ್ಡಿ ಕುಳಗಳ ಕಿರುಕುಳಕ್ಕೆ ಬೇಸತ್ತು.ಕಿರುಕುಳ ಕೊಟ್ಟವರ ಹೆಸರು ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಹೀಗಾಗಿ ನಗರದಲ್ಲಿ ಬಡ್ಡಿ ಕುಳಗಳ ಕಿರುಕುಳ ಬಹಳವಾದ ಹಿನ್ನೆಲೆಯಲ್ಲಿ ಅಮಾಯಕರ ರಕ್ತವನ್ನು ಹೀರುವ ಮೀಟರ್ ಬಡ್ಡಿ ದಂದೇ ಕೋರರ ಮೇಲೆ ಸೂಕ್ತ ಕ್ರಮ ಜರುಗಿಸುವ ಜೊತೆಗೆ ಬಡ್ಡಿ ಕೋರರ ಕಿರುಕುಳಕ್ಕೆ ಬೇಸತ್ತವರು ಅಂಜಿಕೆ ಅಳುಕಿಲ್ಲದೇ ಪೊಲೀಸ್ ಠಾಣೆಗೆ ದೂರನ್ನು ನೀಡಿ ಅಂತಾ ಹೇಳಿದ ಹಿನ್ನೆಲೆ ಕಮಿಷನರ್ ಧೈರ್ಯದ ಮೇಲೆ ಇದೀಗ ಅವಳಿ ನಗರದಲ್ಲಿ ಮೀಟರ್ ಬಡ್ಡಿ ದಂದೇ ಕೋರರ ವಿರುದ್ಧ ಬೆಂಡಿಗೇರಿ,ಕೇಶ್ವಾಪುರ,ವಿದ್ಯಾನಗರ,ಧಾರವಾಡ ಉಪನಗರ,ಕಮರಿಪೇಟ್, ಹಳೇ ಹುಬ್ಬಳ್ಳಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ 16 ಪ್ರಕರಣಗಳು ದಾಖಲಾಗಿದೆ.

ಒಟ್ಟಿನಲ್ಲಿ ಸಾಲದ ರೂಪದಲ್ಲಿ ಕೊಟ್ಟಂತಹ ಒಂದು ಲಕ್ಷಕ್ಕೇ ಆ ಬಡ್ಡಿ, ಈ ಬಡ್ಡಿ, ಚಕ್ರ ಬಡ್ಡಿ ಸೇರಿಸಿ 4 ರಿಂದ 5 ಲಕ್ಷ ಹಣವನ್ನು ಪೀಕಿದವರ ಮೇಲೆ ಕಮಿಷನರ್ ಎನ್ ಶಶಿಕುಮಾರ್ ಸೂಕ್ತ ರೀತಿಯ ಕ್ರಮವನ್ನು ಕೈಗೊಂಡಿದ್ದು.ಇದೀಗ ಬಡ್ಡಿ ಕುಳಗಳಿಗೆ ನಡುಕು ಉಂಟಾಗಿದ್ದಂತೂ ಸುಳ್ಳಲ್ಲ.

Tags:

error: Content is protected !!