ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಡನೂರ ಗ್ರಾಮದ ಬಳಿಯ ಭೀಮಾ ನದಿ ತಟದಲ್ಲಿ ಮಂಗಳವಾರ ರಾತ್ರಿ ಸಹಜವಾಗಿ ಸಂಚರಿಸುತ್ತಿದ್ದ ಗೂಡ್ಸ ರೈಲು ತೇವಾಂಶದ ಪರಿಣಾಮ ರೈಲು ಹಳಿಗಳು ನೆಲದಲ್ಲಿ ಸ್ವಲ್ಪ ಕೆಳಕ್ಕೆ ಇಳಿದ ಪರಿಣಾಮ ರೈಲು ಸಂಚರಿಸಲಾಗದೆ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ಹೌದು, ರೈಲು ಹಳಿಯ ಪಕ್ಕದ ತಗ್ಗಿನಲ್ಲಿ ಮಳೆಯ ನೀರು ನಿಂತು ಉಂಟಾದ ತೇವಾಂಶದಿಂದ ಬ್ರಾಡ್‌ಗೇಜ್ ರೈಲು ಹಳಿಯ ಅಡಿಯ ನೆಲ ತೇವಗೊಂಡ ಪರಿಣಾಮ ಭಾರವಾದ ಗೂಡ್ಸ್ ರೈಲು ಸಂಚರಿಸುವ ವೇಳೆ ರೈಲು ಹಳಿ ನೆಲದಲ್ಲಿ ಸ್ವಲ್ಪ ಖುಸಿತಗೊಂಡ ಕಾರಣ ರೈಲು ಮುಂದಕ್ಕೆ ಸಾಗದೆ ಮರಳಿ ಹಿಂಭಾಗಕ್ಕೆ ಸಾಗಿದ ಬಳಿಕ ಸುರಕ್ಷತೆಯ ದೃಷ್ಠಿಯಿಂದ ಮುಂಜಾಗೃತಾ ಕ್ರಮವಾಗಿ ಬಿಜಾಪುರ – ಸೋಲಾಪುರ ನಡುವೆ ಸಂಚರಿಸುವ ಎಲ್ಲ ರೈಲುಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಈ ಘಟನೆಯ ಕುರಿತು ಸಿದ್ದಿ ತಿಳಿದ ಕೂಡಲೇ ರೈಲು ಇಲಾಖೆಯ ಅಧಿಕಾರಿಗಳು, ಜೆಸಿಬಿ, ಇನ್ನಿತರ ಯಂತ್ರೋಪಕರಣದೊAದಿಗೆ ಸ್ಥಳಕ್ಕೆ ಧಾವಿ ರೈಲು ಹಳಿ ಮಾರ್ಗ ದುರಸ್ತಿಗೊಳಿಸಲು ಶ್ರಮಿಸುತ್ತಿದ್ದಾರೆ.
ಮಂಗಳವಾರ ರಾತ್ರಿ ಸೋಲಾಪುರದಿಂದ ಗೂಡ್ಸ ರೈಲು ಸಂಚರಿಸುತ್ತಾ ಭೀಮಾ ನದಿ ದಾಟಿದ ಪಡನೂರ ರೈಲು ನಿಲ್ದಾಣ ನಿಧಾನವಾಗಿ ತಲುಪುತ್ತಿದಂತೆ ಎಂಜಿನ್ ಮುಂಭಾಗದ ರೈಲು ಹಳಿಗಳು ನೆಲದಲ್ಲಿ ಖುಸಿದಿವೆ. ಇದರಿಂದ ಎಚ್ಚೆತ್ತ ಚಾಲಕ ರೈಲು ನಿಲ್ಲಿಸಿ, ಹಿಂಭಾಗಕ್ಕೆ ಸಂಚರಿಸಿ ರೈಲು ಅಧಿಕಾರಿಗಳಿಗಳಿಗೆ ಮೆಸೆಜ್ ಪಾಸ್ ಮಾಡಿದ್ದಾರೆ ಎನ್ನಲಾಗಿದೆ.
ಸಧ್ಯ ಸೋಲಾಪುರ- ಬಿಜಾಪುರ ಮಾರ್ಗದ ನಡುವೆ ಸಂಚರಿಸುವ ಎಲ್ಲ ಎಕ್ಸಪ್ರೆಸ್, ಪ್ಯಾಸೆಂಜರ್ ರೈಲು ಸ್ಥಗಿತಗೊಳಿಸಲಾಗಿದೆ. ಯಾವುದೇ ರೀತಿಯ ಪ್ರಾಣ ಹಾನಿ ಆಗಿಲ್ಲ. ಎಂದು ರೈಲು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರೈಲು ಹಳಿ ಮಾರ್ಗ ದುರಸ್ತಿಯ ಬಳಿಕ ಮತ್ತೆ ಎಂದಿನಂತೆ ರೈಲುಗಳು ಪುನರಾರಂಭಗೊಳ್ಳಲಿವೆ ಎಂದು ವಿವರಿಸಿದ್ದಾರೆ.