ನಮ್ಮದು ತಾಂತ್ರಿಕ ಹುದ್ದೆ ಅಲ್ಲ, ಆದರು ಟೆಕ್ನಾಲಜಿ ಕೆಲಸ ಕೊಟ್ಟಿದ್ದಾರೆ. ಕೊಟ್ಟರೂ ಸರಿ, ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ಕೊಡದೆ ಕಲಸ ಮಾಡುವಂತೆ ಒತ್ತಡ ಹೇರಿ ಕಿರುಕುಳ ನೀಡಲಾಗುತ್ತಿದ್ದಾರೆ ಎಂದು ಬೆಳಗಾವಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀಕಾಂತ ಶಿಂಧೆ ಆಕ್ರೋಶ ವ್ಯಕ್ತಪಡಿಸಿದರು .
ಇಂದು ಬೆಳಗಾವಿ ನಗರದ ತಹಶೀಲ್ದಾರ ಕಚೇರಿ ಮುಂದೆ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದ ಗ್ರಾಮ ಆಡಳಿತ ಅಧಿಕಾರಿಗಳು, ಮೇಲಾಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು. ಸಿಸಿಇ, ನವೋದಯ, ಸಂಯೋಜನೆ, ಕೃಷಿ ಗಣತಿ, ಆಧಾರ ಸೀಡಿಂಗ್, ಲ್ಯಾಂಡ ಬೀಟ್, ಪೌತಿ ಅಂದೋಲನ, ಪರಿಹಾರ, ಹಕ್ಕು ಪತ್ರ, ಬಗೈರ ಹುಕುಂ ಸೇರಿದಂತೆ 30 ಕ್ಕೂ ಹೆಚ್ಚು ಮೊಬೈಲ್, ಕಂಪ್ಯೂಟರ್ ಪ್ರಿಂಟ್ ಸ್ಕ್ಯಾನರ ಮತ್ತು ಇಂಟರ್ನೆಟ್ ಆಧಾರಿತ ಕೆಲಸಗಳಿಗೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ತಾಂತ್ರಿಕ ಹುದ್ದೆ ಅಲ್ಲದಿದ್ದರೂ ಇವುಗಳನ್ನು ನಿರ್ವಹಿಸಲು ಸರಕಾರದಿಂದ ಯಾವುದೇ ಮೂಲಭೂತ ಸೌಕರ್ಯ ನೀಡಿದೇ, ಸಮಯದಲ್ಲಿ ಪ್ರಗತಿ ಸಾಧಿಸಲು ಒತ್ತಡ ಹೇರುತ್ತಾರೆ. ಅದಕ್ಕಾಗಿ ಸರಕಾರ ಎಲ್ಲಾ ಸೌಕರ್ಯ ನೀಡಿ ಕೆಲಸ ಕೇಳಿದರೆ ಅವರಿಗೂ ಒಂದು ಮಾನ್ಯತೆ ಇರುತ್ತದೆ. ರಜಾ ದಿನಗಳಲ್ಲಿಯೂ ಮಾನವಿಯತೆ ಮರೆತು ತಲಾಠಿಗಳನ್ನು ಮೂಕ ಪ್ರಾಣಿಗಳಂತೆ ಬಳಸಿಕೊಂಡಂತೆ ಆಗುತ್ತದೆ ಎಂದು ಗ್ರಾಮ ಆಡಳಿತ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೈಯಲ್ಲಿ ಮೂಲ ಸೌಲಭ್ಯ ನೀಡುವ ತನಕ ಪ್ರಗತಿ ವರದಿ ಕೇಳದಿರಿ, ಗ್ರಾಮ ಆಡಳಿತ ಅಧಿಕಾರಿಗಳನ್ನು ಮನುಷ್ಯರಂತೆ ಕಾಣಿ, ಅಂಧ ಶ್ರದ್ಧೆ ಮೆರೆಯದಿರಿ, ಮಾತೃ ಇಲಾಖೆ ಕರ್ತವ್ಯ ಮರೆಯದಿರಿ, ಪ್ರಗತಿ ಕುದುರೆ ಬೆನ್ನತ್ತಿ, ಶೂಲಕ್ಕೆ ನಮ್ಮನ್ನು ಸಿಲುಕಿಸದಿರಿ, ನಮ್ಮ ನ್ಯಾಯಯುತ ಬೇಡಿಕೆ ಈಡೇರಲಿ, ಹೋರಾಟ ಎಲ್ಲಿಯವರೆಗೆ ಬೇಡಿಕೆ ಇರುವವರೆಗೂ ಎಂಬ ನಾಮಫಲಕಗಳು ರಾರಾಜಿಸುತ್ತಿದ್ದವು
ಬೆಳಗಾವಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀಕಾಂತ ಶಿಂಧೆ ನಮ್ಮದು ತಾಂತ್ರಿಕ ಹುದ್ದೆ ಅಲ್ಲ, ಆದರು ಟೆಕ್ನಾಲಜಿ ಕೆಲಸ ಕೊಟ್ಟಿದ್ದಾರೆ. ಕೊಟ್ಟರೂ ಸರಿ, ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ಕೊಡದೆ ಕಲಸ ಮಾಡುವಂತೆ ಒತ್ತಡ ಹೇರಿ ಕಿರುಕುಳ ನೀಡಲಾಗುತ್ತಿದ್ದಾರೆ. ಮುಂದೆ ನಮ್ಮ ಕಾರ್ಯಾವಧಿ ಹಾಗೂ ಕಾರ್ಯವ್ಯಾಪ್ತಿ ಬಿಟ್ಟು ಹಗಲು ರಾತ್ರಿ ಎನ್ನುದೆ ಕೆಲಸದ ಒತ್ತಡ ಹೇರಲಾಗುತ್ತಿದೆ. ಇದರಿಂದಾಗಿ ಇತ್ತೀಚಿಗೆ ತಲಾಠಿಗಳು ಈ ಒತ್ತಡ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುಂತ ಪರಿಸ್ಥಿತಿಗಳು ಬಂದೋದಗಿವೆ. ಅದಲ್ಲದೇ ಈ ಕಿರುಕುಳ ತಾಳಲಾರದೆ ತಲಾಠಿಗಳು ದುಷ್ಚ್ಟಗಳಿಗೆ ದಾಸರಾಗಿ ಕೌಟುಂಬಿಕ ಕಲಹದಿಂದಾಗಿ ಬಲಿಯಾಗುತ್ತಿದ್ದಾರೆ. ಎಂದು ಕಳವಳ ವ್ಯಕ್ತಪಡಿಸಿದರು.
ದಿವ್ಯ ಕಲಾದಗಿ, ಗ್ರಾಮ ಅಧಿಕಾರಿ ಮಾತನಾಡಿ ಸರ್ಕಾರಿ ದಿನಗಳಲ್ಲಿ ಕೆಲಸ ಮಾಡಿ ಹಿರಿಯ ಮೇಲಾಧಿಕಾರಿಗಳಿಂದ ಒತ್ತಡ ಹಾಕಲಾಗುತ್ತೀದೆ , ಕುಟುಂಬದೊಂದಿಗೆ ಕಾಲ ಕಳೆಯಲು ಆಗುತ್ತೀಲ್ಲ , ನಮ್ಮಗೆ ಯಾವುದೇ ಒಡ್ತಿ ನೀಡುತ್ತೀಲ್ಲ , ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಮಾಡಿ ಕೊಡುತ್ತೀಲ್ಲ ಎಂದು ಬೇಸರ ವ್ಯಕ್ತಪಡಿಸಿದರು .