Uncategorized

ಗಣೇಶೋತ್ಸವದ ವೇಳೆ ಮರಾಠಿ ಫಲಕ…ಕ್ರಮಕೈಗೊಳ್ಳದ ಮಹಾಪಾಲಿಕೆ ವಿರುದ್ಧ ಕರ್ನಾಟಕ ಯುವ ರಕ್ಷಣಾ ವೇದಿಕೆ ಪ್ರತಿಭಟನೆ

Share

ಬೆಳಗಾವಿಯಲ್ಲಿ ಗಣೇಶೋತ್ಸವದ ವೇಳೆ ಮರಾಠಿ ಫಲಕಗಳನ್ನು ಅಳವಡಿಸಿರುವುದನ್ನು ತೆರವುಗೊಳಿಸದ ಬೆಳಗಾವಿ ಮಹಾನಗರ ಪಾಲಿಕೆಯ ವಿರುದ್ಧ ಇಂದು ಬೆಳಗಾವಿಯಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬೆಳಗಾವಿಯಲ್ಲಿ ನಡೆದ ಗಣೇಶೋತ್ಸವದ ವೇಳೆ ಶುಭಾಷಯ ಸೇರಿದಂತೆ ಜಾಹೀರಾತಿನ ಫಲಕಗಳು ಮರಾಠಿ ಸೇರಿದಂತೆ ಇನ್ನುಳಿದ ಭಾಷೆಗಳಲ್ಲಿರುವುದರ ವಿರುದ್ಧ ಕನ್ನಡ ಪರ ಸಂಘಟನೆಗಳು ಬೆಳಗಾವಿ ಮಹಾನಗರ ಪಾಲಿಕೆಗೆ ಅವುಗಳನ್ನು ತೆರವುಗೊಳಿಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಆದರೇ ಮಹಾನಗರ ಪಾಲಿಕೆ ರಜೆಯ ನೆಪ ಹೇಳಿ ಯಾವುದೇ ಕ್ರಮಕೈಗೊಂಡಿಲ್ಲವೆಂದು ಆರೋಪಿಸಿ ಇಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ಕುರಿತು ಇನ್ ನ್ಯೂಸಗೆ ಮಾಹಿತಿಯನ್ನು ನೀಡಿದ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಗಣೇಶೋತ್ಸವದ ವೇಳೆ ಕನ್ನಡ ಫಲಕಗಳನ್ನು ಅಳವಡಿಸದವರ ವಿರುದ್ಧ ಮಹಾಪಾಲಿಕೆ ಯಾವುದೇ ಕ್ರಮಕೈಗೊಂಡಿಲ್ಲ. ದೂರು ನೀಡಿದರೂ ನಿರ್ಲಕ್ಷ ಧೋರಣೆ ತೋರಿದೆ. ಕರ್ನಾಟಕದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದನ್ನು ಸಹಿಸುವುದಿಲ್ಲ. ಅಲ್ಲದೇ ನಗರದ ಅಂಗಡಿ ಮುಂಗಟ್ಟುಗಳ ಮೇಲು ಕನ್ನಡಕ್ಕೆ ಪ್ರಾಧಾನ್ಯತೆ ಸಿಗುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ಧರು.

Tags:

error: Content is protected !!