Belagavi

ಉತ್ಸಾಹದಲ್ಲಿ ನಡೆದ ಬೆಳಗಾವಿ ಜಿಲ್ಲಾ ದಸರಾ ಈಜು ಸ್ಪರ್ಧೆ

Share

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ದಸರಾ ಈಜು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸೆ.25 ರಂದು ಗೋವಾವೆಸನಲ್ಲಿರುವ ಈಜುಕೊಳದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ನಗರಸೇವಕ ನಿತೀನ್ ಜಾಧವ ಅವರು ಸ್ಪರ್ಧೆಯನ್ನು ಉದ್ಘಾಟಿಸಿದರು. ಇದೇ ವೇಳೆ ಮೈಸೂರು ದಸರಾದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಈಜುಪಟುಗಳು ಸಾಧನೆಯನ್ನು ಮಾಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಈಜು ತರಬೇತುದಾರ ವಿಶ್ವಾಸ ಪವಾರ್, ಪ್ರಸಾದ್ ಸುಣಗಾರ, ಸುನೀಲ್ ಹಣಮನ್ನವರ, ಶುಭಾಂಗಿ ಮಂಗಳೂರಕರ್, ಸುಧೀರ್ ಧಾಮಣಕರ್, ಸಂದೀಪ್ ಮೋಹಿತೆ, ವಿಜಯ ಶಿರಸಾಟ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸ್ಪರ್ಧೆಯನ್ನು ಯಶಸ್ವಿಗೊಳಿಸಲು ಅಬಾ ಮತ್ತು ಹಿಂದ್ ಕ್ಲಬ್ ತರಬೇತುದಾರರಾದ ಅಮಿತ್ ಜಾಧವ್, ರಂಜಿತ್ ಪಾಟೀಲ್, ಶಿವರಾಜ್ ಮೋಹಿತೆ, ವಿಶಾಲ್ ವೇಸನೆ, ಕಾಳಪ್ಪ ಪಾಟೀಲ್, ಕಿಶೋರ್ ಪಾಟೀಲ್, ಭರತ್ ಪಾಟೀಲ್, ವಿಜಯ ನಾಯ್ಕ್, ನಿಖಿಲ್ ಬೆಕಣೆ, ಪ್ರಸಾದ್

ದರವಂದರ್, ಓಂ ಲೋಹಾರ್, ಓಂ ಘಾಡಿ, ಚಂದ್ರಕಾಂತ್ ಬಿಳಗೋಜಿ ಸೇರಿದಂತೆ ಇನ್ನುಳಿದವರು ಶ್ರಮಿಸಿದರು.

Tags:

error: Content is protected !!