Uncategorized

ಕ್ರೈಮ್ ಬ್ರ್ಯಾಂಚ್ ಹೆಸರಲ್ಲಿ ವಿಡಿಯೋ ಕಾಲ್ ಮೂಲಕ ವಂಚನೆಗೆ ಯತ್ನ : ಚಾಣಾಕ್ಷತನದಿಂದ ಪಾರಾದ ಯುವಕ

Share

ಮೋಸ ಹೋಗುವವರು ಎಲ್ಲಿಯವರೆಗೆ ಇರ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೆ ಇರ್ತಾರೆ. ಆದ್ರೆ ಇಂಟರ್ನೆಟ್ ಮೂಲಕ ಆನ್ಲೈನ್ ವಂಚನೆ ಗಳು ದಿನ ನಡೆಯುತ್ತಲೇ ಇರ್ತವೆ. ಹೀಗೆ ಯುವಕನಿಗೆ ಮಹಾರಾಷ್ಟ್ರ ಪೊಲೀಸರು ಎಂದು ವಿಡಿಯೋ ಕಾಲ್ ಮಾಡಿ ವಂಚಿಸಲು ಯತ್ನಿಸಿದ್ದಾರೆ. ಆದ್ರೆ ಚಾಣಾಕ್ಷ ಆ ಯುವಕ ಅವರಿಗೆನೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ. ಇದೀಗ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಕುರಿತು ಇಲ್ಲಿದೆ ಡಿಟೇಲ್ಸ್..

ಇದು 5ಜಿ ಯುಗ, ಇಂಟರ್ನೆಟ್ ಎನ್ನುವ ಮಾಯಾಜಾಲ ಎಲ್ಲೆಡೆ ವಿಶ್ವವ್ಯಾಪಿಯಾಗಿದೆ. ಬದುಕಿನುದ್ದಕ್ಕೂ ಅಂತರ್ಜಾಲ ದೊಂದಿಗಿನ ಸಂಬಂಧ ಬೆಸೆದುಕೊಂಡಿದೆ. ಜೊತೆ ಜೊತೆಗೆ ಅನೇಕ ಮೋಸ, ವಂಚನೆ ಸೇರಿದಂತೆ ಕ್ರಿಮಿನಲ್ ದಂಧೆಗಳು ಈಗ ಇಂಟರ್ನೆಟ್ ಜೊತೆಗೆ ಬೆಸೆದುಕೊಂಡು ಬಿಟ್ಟಿವೆ. ಜನರಿಗೆ ವಿಡಿಯೋ ಕರೆಗಳನ್ನ ಮಾಡಿ ವಂಚನೆ ಮಾಡುವ ಜಾಲ ಹಬ್ಬಿದೆ. ಇನ್ನು ಇತ್ತೀಚೆಗೆ ಕರೆಗಳನ್ನ ಮಾಡಿ ಓಟಿಪಿಗಳನ್ನ ಪಡೆದು ಹಣ ವಂಚನೆ ಮಾಡ್ತಿದ್ದ ಖದೀಮರೀಗ ಬೇರೆ ಮಾರ್ಗವನ್ನೆ ಹಿಡಿದಿದ್ದಾರೆ. ತಾವು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಎಂದು ವಿಡಿಯೋ ಕರೆ ಮಾಡಿ ಬೆದರಿಸುವ ದಂಧೆ ಶುರುವಾಗಿದೆ. ವಿಡಿಯೋ ಕರೆ ಮಾಡುವ ಖದೀಮರು ಪೊಲೀಸರ ವೇಗದಲ್ಲಿದ್ದು, ನಿಮ್ಮ ಮೊಬೈಲ್ ನಂಬರ್ ಮೇಲೆ ಕೇಸ್ ಇದೆ. ವಿಚಾರಣೆಗೆ ಹಾಜರಾಗಲು ಮುಂಬೈಗೆ ಬನ್ನಿ ಎಂದು ಕರೆ ಮಾಡ್ತಾರೆ. ನಾವು ಬೇರೆ ರಾಜ್ಯದಲ್ಲಿರೋದು ಅಂದಾಗ, ಹಾಗಿದ್ರೆ ವಿಡಿಯೋ ಕಾಲ್ ಮೂಲಕವೇ ವಿಚಾರಣೆಗೆ ಹಾಜರಾಗಿ ಎನ್ತಾರೆ. ವಿಚಾರಣೆ ಹೆಸ್ರಲ್ಲಿ ಬೆದರಿಸುವ ನಕಲಿ ಪೊಲೀಸ್ ಹಣಕ್ಕೆ ಬೇಡಿಕೆ ಇಡ್ತಾನೆ. ಅಲ್ಲದೆ ನಿಮ್ಮ ಬ್ಯಾಂಕ್ ಖಾತೆಗಳನ್ನೆ ಮುಟ್ಟುಗೋಲು ಹಾಕಲಾಗುವುದು ಎಂದು ನಕಲಿ ಪೊಲೀಸ್ ವೇಶದಲ್ಲಿರೋ ಖದೀಮರಿಂದ ಧಮ್ಕಿ ಬರುತ್ತೆ. ಅಪ್ಪಿ ತಪ್ಪಿ ಅವರು ಹೇಳುವ ಕೆಲಸಕ್ಕೆ ಒಪ್ಪಿಕೊಂಡರೆ ಹಣವನ್ನ ಬಾಚಿ ವಿಡಿಯೋ ಕರೆ ಕಟ್ ಮಾಡಿ ಮಂಗಮಾ ಯವಾಗ್ತಾರೆ..

ಇದೆ ರೀತಿ ಗುಮ್ಮಟನಗರಿ ವಿಜಯಪುರದ ವ್ಯಕ್ತಿಯೊಬ್ಬನಿಗೆ ಕರೆ ಬಂದಿದೆ. ನಗರದ ನಿವಾಸಿ ಸಂತೋಷ ಚೌಧರಿ ಎಂಬಾತನಿಗೆ ವಿಡಿಯೋ ಕರೆ ಮಾಡಿದ ಗ್ಯಾಂಗ್ ತಾವು ಮುಂಬೈ ಅಂದೇರಿ ನಗರಿ ಪೊಲೀಸರು ಎಂದು ಪರಿಚಯ ಮಾಡಿಕೊಂಡಿದ್ದಾರೆ. ನಿಮ್ಮ ಸಿಮ್ ಆಧಾರ್ ಕಾರ್ಡ್‌ಗೆ ಲಿಂಕ್ ಇದೇಯಾ ಎಂದು ವಿಚಾರಿಸಿದ್ದಾರೆ. ಹುಂ ಎಂದಾಗ ನಿಮ್ಮ ಮೊಬೈಲ್ ನಂಬರ್ ಮೇಲೆ ಮುಂಬೈನ ಅಂದೇರಿ ನಗರಿ ಪೊಲೀಸ್ ಠಾಣೆಯಲ್ಲಿ ಬರೊಬ್ಬರಿ 17 ಕೇಸ್ ದಾಖಲಾಗಿವೆ ಎಂದಿದ್ದಾರೆ. ಅಲ್ಲದೆ ಆಧಾರ್ ಕಾರ್ಡ್ ನಂಬರ್, ಓಟಿಪಿ ವಿಚಾರಿಸಿದ್ದಾರೆ. ಕೊಡಲು ನಿರಾಕರಿಸಿದ ಸಂತೋಷಗೆ ಅವಾಚ್ಯವಾಗಿ ನಿಂದಿಸಿದ್ದಾರೆ.. ಬಳಿಕ ವಾಗ್ವಾದ ಉಂಟಾಗಿ ಸಂತೋಷ ವಿಡಿಯೋ ಕರೆ ಕಟ್ ಮಾಡಿದ್ದಾನೆ.. ಇನ್ನೂ ವಾಪಸ್ ಕರೆ ಮಾಡಿದ ಖದೀಮರು ಆಧಾರ್ ಲಿಂಕ್ ಇರೋ ನಂಬರ್ ಗೆ ಓಟಿಪಿ ಬರುತ್ತೆ ಲಿಂಕ್ ನೀಡುವಂತೆ ಒತ್ತಾಯಿಸಿದ್ದಾರೆ‌. ಅಲ್ಲದೆ ಪೊಲೀಸರು ಎಂದಾಗ ಆರಂಭದಲ್ಲಿ ಹೆದರಿದ ಸಂತೋಷ ಬಳಿಕ ಯಾವಾಗ ಓಟಿಪಿ, ಬ್ಯಾಂಕ್ ಖಾತೆಗಳ‌ ಬಗ್ಗೆ ವಿಚಾರಿಸಲು ಆರಂಭಿಸಿದ್ದಾರೋ ಆಗ ಅಲರ್ಟ್ ಆಗಿದ್ದಾನೆ. ಕರೆ ಕಟ್ ಮಾಡಿ ಪ್ರಾಂಡ್ ನಿಂದ ಬಚಾವ್ ಆಗಿದ್ದಾನೆ.

ಇದೀಗ ಸಂತೋಷ ಈ ಖದೀಮರ ವಿರುದ್ಧ ವಿಜಯಪುರ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ದೂರು ದಾಖಲಾಗಿದೆ. ಒಟ್ನಲ್ಲಿ ಸಂತೋಷ ಚಾಲಾಕಿತನದಿಂದ ವಂಚನೆಯಿಂದ ಬಚಾವಾಗಿದ್ದಾನೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ತಾಳ್ಮೆಯಿಂದ ವ್ಯವಹರಿಸಬೇಕು ಬೇಕು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ‌

Tags:

error: Content is protected !!