Dharwad

ಗ್ಯಾರಂಟಿ ಸಮಾವೇಶದಲ್ಲಿ ಅವ್ಯವಹಾರ: ಧಾರವಾಡ ಡಿಸಿ ದಿವ್ಯ ಪ್ರಭು ಸೇರಿ ಐವರ ವಿರುದ್ಧ ಲೋಕಾಯುಕ್ತಕ್ಕೆ ದೂರು

Share

ಧಾರವಾಡ ಜಿಲ್ಲೆಯಲ್ಲಿ ನಡೆದ ಗ್ಯಾರಂಟಿ ಸಮಾವೇಶದ ಐದು ಕಾರ್ಯಕ್ರಮದಲ್ಲಿ ನಡೆದಿದ್ದು, ಅವುಗಳ ಖರ್ಚಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಸೇರಿ ಐದು ಜನ ಅಧಿಕಾರಿಗಳ ಮೇಲೆ ಪ್ರಕರಣ ದಾಖಲು ಮಾಡಿರುವುದಾಗಿ ಆರ್.ಟಿ.ಆಯ್ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ತಿಳಿಸಿದರು.

ಈ ಕುರಿತು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಸಮಾವೇಶದ ನೆಪದಲ್ಲಿ ಗ್ಯಾರಂಟಿ ಯೋಜನಾ ಸಮಾವೇಶದ ಸಮಿತಿಯವರು ಖೂಟ್ಟಿ ದಾಖಲೆಗಳನ್ನು ಸೃಷ್ಟಿಸಿ, ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ ಮಾಹಿತಿ ಹಕ್ಕು ಕಾಯ್ದೆಯಿಂದ ಪಡೆದಿರುವಂತಹ ದಾಖಲೆಗಳಿಂದ ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ ದಾಖಲೆಗಳನ್ನು ಲಗತ್ತಿಸಿ ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿಲಾಗಿದೆ. ಜಿಲ್ಲಾಧಿಕಾರಿ ದಿವ್ಯ ಪ್ರಭು, ಅಪರ್ ಜಿಲ್ಲಾಧಿಕಾರಿ ಗೀತಾ, ಹು-ಧಾ ಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ, ಧಾರವಾಡ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಾ ವಿಜಯ ಕುಮಾರ, ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ, ಹುಬ್ಬಳ್ಳಿ ಇವರು ಗ್ಯಾರಂಟಿ ಸಮಾವೇಶದ ಕಾರ್ಯಕ್ರಮ ನಿರ್ವಹಣಾ ಸಮಿತಿಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಖೊಟ್ಟಿ ದಾಖಲೆಗಳನ್ನು ಮಾಹಿತಿ ಹಕ್ಕಿನಡಿ ನೀಡಿದ್ದಾರೆ.

ನವಲಗುಂದದಲ್ಲಿ‌ಮಡೆದ ಗ್ಯಾರಂಟಿ ಸಮಾವೇಶಕ್ಕೆ ಖರ್ಚಾಗಿರುವಂತಹ ಮೊತ್ತ 87ಲಕ್ಷ 93ಸಾವಿರ 004 ರೂಪಾಯಿ, ಧಾರವಾಡ ಕೆ.ಸಿ.ಡಿ ಮೈದಾನದ ಸಮಾವೇಶಕ್ಕೆ ಖರ್ಚಾಗಿರುವಂತಹ ಮೊತ್ತ ಅಂದಾಜು 1ಕೋಟಿ37ಲಕ್ಷ 50 ಸಾವಿರ133ರೂಪಾಯಿ, ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ನಡೆದ ಸಮಾವೇಶಕ್ಕೆ ಖರ್ಚಾಗಿರುವಂತಹ ಮೊತ್ತ- 1ಕೋಟಿ 24ಲಕ್ಷ 20ಸಾವಿರ 041ರೂಪಾಯಿ, ಜಿಲ್ಲಾ ಉಸ್ತುವಾರಿ ಸಚಿ ಲಾಡ್ ಕ್ಷೇತ್ರ ಕಲಘಟಗಿಯಲ್ಲಿ ನಡೆದ ಸಮಾವೇಶಕ್ಕೆ ಖರ್ಚಾಗಿರುವಂತಹ ಮೊತ್ತ- 57ಲಕ್ಷ 26ಸಾವಿರ 400 ರೂಪಾಯಿ. ಇನ್ನೂ ಕುಂದಗೋಳದಲ್ಲಿ ನಡೆದ ಕಾರ್ಯಕ್ರಮಕ್ಕೆ ಖರ್ಚಾಗಿರುವಂತಹ ಮೊತ್ತ- 54ಲಕ್ಷ 26ಸಾವಿರ 400ರೂಪಾಯಿ ಖರ್ಚಾಗಿರುವ ಮಾಹಿತಿ ನೀಡಿದ್ದಾರೆ. ಇದರಲ್ಲಿ ಅವ್ಯವಹಾರ ನಡೆದಿರುವ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿ ಇದರ ಸತ್ಯಾಸತ್ಯೆಯನ್ನು ಹೊರತರಬೇಕು ಎಂದು ಒತ್ತಾಯಿಸಿದರು. ‌

ಮಾಹಿತಿಗಾಗಿ -ಏನಿದು ಪ್ರಕರಣ ಧಾರವಾಡ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನಗಳ ಫಲಾನುಭವಿಗಳ ಐದು ಸಮಾವೇಶಗಳನ್ನು ಸರ್ಕಾರದಿಂದ ಹಮ್ಮಿಕೊಂಡಿದ್ದರು, ದಿನಾಂಕ 03-02-2024 ಸಮಾವೇಶ -1 ಹುಬ್ಬಳ್ಳಿಯ ರೈಲ್ವೆ ಮೈದಾನ, ದಿನಾಂಕ 05-02-2024 ಸಮಾವೇಶ -2 ಧಾರಾವಾಡ ಕರ್ನಾಟಕ ಕಾಲೇಜು ಮೈದಾನ, ದಿನಾಂಕ 24-02-2024 ಸಮಾವೇಶ -3 ನವಲಗುಂದದ ಮಾಡೆಲ್ ಹೈಸ್ಕೂಲ್ ಮೈದಾನ, ದಿನಾಂಕ 09-03-2024 ಸಮಾವೇಶ -4 ಕುಂದಗೋಳ ಹಾಗೂ ದಿನಾಂಕ 11-03-2024 ಸಮಾವೇಶ -5 ಕಲಘಟಗಿಯಲ್ಲಿ ಹಮ್ಮಿಕೊಂಡಿದ್ದು ಒಂದು ಸಮಾವೇಶಕ್ಕೇ 70 ಲಕ್ಷಕ್ಕಿಂತಲೂ ಅಧಿಕ ಮೊತ್ತವನ್ನು ಖರ್ಚು ಮಾಡಿದ್ದು ದಾಖಲೆಗಳಿಂದ ಕಂಡು ಬಂದಿದೆ, ಈ ಪ್ರಕರಣದಲ್ಲಿ ದಿವ್ಯ ಪ್ರಭು ಜಿ.ಆರ್.ಜೆ, ಜಿಲ್ಲಾಧಿಕಾರಿಗಳು, ಧಾರವಾಡ, ಗೀತಾ ಸಿ.ಡಿ, ಅಪರ ಜಿಲ್ಲಾಧಿಕಾರಿಗಳು, ಧಾರವಾಡ, ಈಶ್ವರ ಉಳ್ಳಾಗಡ್ಡಿ, ಆಯುಕ್ತರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ , ವಿಜಯ ಕುಮಾರ, ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಧಾರವಾಡ, ವಿಶ್ವನಾಥ ಮುಖ್ಯ ಲೆಕ್ಕಾಧಿಕಾರಿಗಳು, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ ಇವರು ಗ್ಯಾರಂಟಿ ಸಮಾವೇಶದ ಕಾರ್ಯಕ್ರಮ ನಿರ್ವಹಣಾ ಸಮಿತಿಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಖೊಟ್ಟಿ ದಾಖಲೆಗಳನ್ನು ಮಾಹಿತಿ ಹಕ್ಕಿನಡಿ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇ ಬರುವ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಧಾರವಾಡ ಜಿಲ್ಲೆಯ ಸಮಾವೇಶದ ಉಸ್ತುವಾರಿಯನ್ನು ಜಿಲ್ಲಾಧಿಕಾರಿಗಳು ನಿರ್ವಹಿಸಿದ್ದು ಲೆಕ್ಕ ಪತ್ರದಲ್ಲಿ ಅವ್ಯವಹಾರ ಆಗಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲು ಮುಖ್ಯ ಕಾರಣವೆಂದು ತಿಳಿಸಿದರು. ನವಲಗುಂದದ ಮಾಡೆಲ್ ಹೈಸ್ಕೂಲ್ ನಲ್ಲಿ ನಡೆದ ಸಮಾವೇಶ ಕಾರ್ಯಕ್ರಮಕ್ಕೇ ಉಪಹಾರ, ಬಸ್ ವ್ಯವಸ್ಥೆ ಹಾಗೂ ಸೌಂಡ್ ಸಿಸ್ಟಮ್ ಗಾಗಿ ಖರ್ಚಾಗಿರುವಂತಹ ಮೊತ್ತ 87,93,004..

ಧಾರವಾಡ ಕೆ.ಸಿ.ಡಿ ಮೈದಾನದಲ್ಲಿ ನಡೆದಂತಹ ಸಮಾವೇಶ ಕಾರ್ಯಕ್ರಮದಲ್ಲಿ ಉಪಹಾರ, ಖರ್ಚಾಗಿರುವಂತಹ ಮೊತ್ತ ಅಂದಾಜು 1,37,50,133 ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ನಡೆದ ಸಮಾವೇಶ ಕಾರ್ಯಕ್ರಮದಲ್ಲಿ ಉಪಹಾರ,ಸೌಂಡ್ ಸಿಸ್ಟಮ್ ಹಾಗೂ ಬಸ್ ವ್ಯವಸ್ಥೆಗಾಗಿ ಖರ್ಚಾಗಿರುವಂತಹ ಮೊತ್ತ- 1,24,20,041 ಕಲಘಟಗಿಯಲ್ಲಿ ನಡೆದ ಸಮಾವೇಶ ಕಾರ್ಯಕ್ರಮದಲ್ಲಿ ಉಪಹಾರ ಮತ್ತು ಬಸ್ ವ್ಯವಸ್ಥೆಗಾಗಿ ಖರ್ಚಾಗಿರುವಂತಹ ಮೊತ್ತ- 57,26,400 ಕುಂದಗೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಹಾರ ಮತ್ತು ಬಸ್ ವ್ಯವಸ್ಥೆಗಾಗಿ ಖರ್ಚಾಗಿರುವಂತಹ ಮೊತ್ತ- 54,26,400

ಸದರಿ ಸಮಾವೇಶದಲ್ಲಿ ಬಿಲ್ ತೆಗೆಯಲು ಲಗತ್ತಿಸಿರುವಂತಹ ದಾಖಲೆಗಳಲ್ಲಿ ಸಮಾವೇಶ ನಡೆದ ದಿನಾಂಕ ಬಿಲ್ ನಲ್ಲಿ ನಮೋದಿಸಿರುವಂತಹ ದಿನಾಂಕದಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಬಡವರ ಹೆಸರಿನಲ್ಲಿ ಗ್ಯಾರಂಟಿ ಸಮಾವೇಶದ ನೆಪದಲ್ಲಿ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣವನ್ನು ಅವ್ಯವಹಾರ ಮಾಡಿದ್ದಾರೆ, ಈ ಕುರಿತು ಲೋಕಾಯುಕ್ತರಿಂದ ತನಿಖೆ ನಡೆದಾಗಲೇ ಸತ್ಯಾ-ಸತ್ಯತೆ ಹೊರಬರುತ್ತೆ, ಲೋಕಾಯುಕ್ತರು ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಸ್ವಾಮಿ ಮಠಪತಿ ಉಪಸ್ಥಿತರಿದ್ದರು.

Tags:

error: Content is protected !!