Athani

ಎರಡು ವರ್ಷ ಮುಗಿದರು ಬಳಕೆಗೆ ಬಾರದ ಶೌಚಾಲಯ;ಹತ್ತು ಲಕ್ಷ ನೀರಲ್ಲಿ ಹೋಮ

Share

ಅಥಣಿ : ಶಾಲಾ ಮಕ್ಕಳಿಗೆ ಶುಚಿ ಶೌಚಾಲಯ ಹಾಗೂ ಸ್ನಾನದ ಕೊನೆ ನಿರ್ಮಾಣಕ್ಕೆ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡ್ದಿತ್ತಾದರೂ ಕೆಲ ಮದ್ಯವರ್ತಿಗಳ ನಿರ್ಲಕ್ಷದಿಂದ ಸಾರ್ವಜನಿಕ ತೆರೆಗೆ ಹಣ ಸದ್ಭಳಕೆಯಾಗುತ್ತಿಲ್ಲ ಅನ್ನುವುದಕ್ಕೆ ನೈಜ ಉದಾಹರಣೆ ಎಂಬಂತೆ ರಡ್ಡೆರಹಟ್ಟಿ ಗ್ರಾಮದ ಕಸ್ತೂರ ಬಾ ಶಾಲಾ ಬಾಲಕಿಯರ ವಸತಿ ನಿಲಯದಲ್ಲಿ ನೂತನ ಶೌಚಾಲಯ & ಸ್ನಾನದ ಕಟ್ಟಡ ವಿದ್ದರೂ ಬಳಕೆಗೆ ನೀಡುತ್ತಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ.

2022-23 ನೆ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಡಿಯಲ್ಲಿ ಸುಮಾರು ಹತ್ತು ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಕಟ್ಟಡ ಕಾಮಗಾರಿ ಕಳಪೆ ಗುಣಮಟ್ಟದ ಆರೋಪವು ಕೇಳಿಬಂದಿದೆ.ಅಧಿಕಾರಿಗಳ ಅಸಡ್ಯತನದಿಂದ ಶಾಲಾ ವಿದ್ಯಾರ್ಥಿನಿಯರೂ ನೂರೆಂಟು ಸಮಸ್ಯೆ ಎದುರಿಸುತ್ತಿದ್ದೂ ಕೂಡಲೇ ಮೇಲಧಿಕಾರಿಗಳು ಸಮಸ್ಯೆ ಬಗೆಹರಿಸಿ ಮಕ್ಕಳಿಗೆ ಶೌಚಾಲಯ ಹಾಗೂ ಸ್ನಾನ ಗೃಹ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.

Tags:

error: Content is protected !!