Uncategorized

ಭಾರಿ ಮಳೆಗೆ ಕೊಚ್ಚಿ ಹೋಗಿ ವ್ಯಕ್ತಿ ಸಾವು..!

Share

 

ಅಥಣಿ : ನಸುಕಿನ ಜಾವ ದೇವರ ದರ್ಶನಕ್ಕೆಂದು ತೆರಳಿದ ವ್ಯಕ್ತಿ ಭಾರಿ ಮಳೆಯ ನೀರಿನ ರಭಸಕ್ಕೆ ಸಿಲುಕಿ ಶವವಾಗಿ ಪತ್ತೆಯಾಗಿದ್ದಾನೆ.

ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಜೇರೆ ಗಲ್ಲಿ ನಿವಾಸಿ ಗುರುರಾಜ ಈರಪ್ಪ ಯಾದವಾಡ (75) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಇಂದೇ ನಸುಕಿನ ಜಾವ ದೇವರ ದರ್ಶನಕ್ಕೆ ಮಸೊಬಾ ಹಳ್ಳ ದಾಟುವಾಗ ನೀರಿನ ರಭಸಕ್ಕೆ ವ್ಯಕ್ತಿ ಕೊಚ್ಚಿಹೋಗಿದ್ದು ಆಜಾದ್ ಸರ್ಕಲ್ ಬಳಿಯ ಅಗಸಿ ಹತ್ತಿರ ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಜರುಗಿದೆ..

 

Tags:

error: Content is protected !!