ನಶೆಯ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕರು ನಡುವೆ ಜಗಳ ಆರಂಭವಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾಗ ಓರ್ವ ಚಾಕು ಇರಿತಕ್ಕೆ ಒಳಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಘಟನೆಗೆ ಸಂಬಂಧಿಸಿದಂತೆ 6 ಜನರನ್ನು ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಆನಂದ ನಗರದ ಮದೀನಿ ಮಸೀದಿ ಬ್ರಿಡ್ಜ್ ಬಳಿಯಲ್ಲಿ ಅದೇ ಏರಿಯಾದ ಎರಡು ಗುಂಪಿನ ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.ಹೊಡೆದಾಟದ ವೇಳೆಯಲ್ಲಿ ಓರ್ವನಿಗೆ ಚಾಕು ಇರಿತ ಕೂಡಾ ಉಂಟಾಗಿದ್ದು ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡಾ ಕೊಡಿಸಲಾಗುತ್ತಿದೆ.
ಇನ್ನು ಹೊಡೆದಾಟದ ವೇಳೆಯಲ್ಲಿ ಓರ್ವ ರೌಡಿ ಶೀಟರ್ ಕೂಡಾ ಇರೋದು ಕೂಡಾ ಗೊತ್ತಾಗಿದ್ದು ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಎರಡು ಕಡೆ ಪ್ರಕಾರಣಗಳನ್ನು ದಾಖಲು ಮಾಡಿಕೊಂಡು 6 ಜನರನ್ನು ಬಂಧನ ಮಾಡಿದ್ದಾರೆ. ಇನ್ನು ಕೆಲವೊಂದಿಷ್ಟು ಜನ ತಲೆ ಮರೆಸಿಕೊಂಡಿದ್ದು ಅವರ ಪತ್ತೆಗೆ ಕೂಡಾ ಪೊಲೀಸರು ಮುಂದಾಗಿದ್ದಾರೆ.ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.