ಸಿನಿಮಿಯ ರೀತಿಯಲ್ಲಿ ಪಿಸ್ತೂಲ್ ತೋರಿಸಿ ಆರೋಪಿ ಯನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ವಿಜಯಪುರ ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಿನ್ನೆ ಮಧ್ಯಾಹ್ನ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಆರೋಪಿ ಅವಿನಾಶ್ ಮಚ್ಚಾಳೆ ಬಂಧನಕ್ಕೆ ಆಗಮಿಸಿದ್ದ ವೇಳೆ ಪೊಲೀಸರಿಗೆ ಪಿಸ್ತೂಲ್ ತೋರಿಸಿದ್ದಾನೆ. ಮೂಲತಃ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ತಾಮ್ರದ ವೈರ್ ಕದ್ದ ಆರೋಪಿ ಅವಿನಾಶ ಈತ ತನ್ನ ಕುಟುಂಬಸ್ಥರೊಂದಿಗೆ ಆರೋಪಿ ಅವಿನಾಶ್ ವಿಜಯಪುರ ದಲ್ಲಿದ್ದಾನೆ ಎಂಬ ಮಾಹಿತಿ ಆಧರಿಸಿ ವಿಜಯಪುರಕ್ಕೆ ಆಗಮಿದ್ದರು.
ಅವಿನಾಶ್ ಬಂಧನಕ್ಕೆ ಮುಫ್ತಿಯಲ್ಲಿದ್ದ ಪೊಲೀಸರು ಮುಂದಾಗುತ್ತಿದ್ದಂತೆ ಆತನ ಕುಟುಂಬದ ಮಹಿಳೆಯರಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಸಂದರ್ಭದಲ್ಲಿ ಗಲಾಟೆ ನಡೆಯಿತು. ಗಲಾಟೆಯ ಕಾರಣ ಸ್ಥಳದಲ್ಲಿ ಜನರು ಜಮಾಯಿಸಿದರು. ಈ ವೇಳೆ ಆರೋಪಿ ಅವಿನಾಶ್ ಪರಾರಿಯಾಗಲು ಯತ್ನಿಸಿದಾಗ ಆರೋಪಿ ಅವಿನಾಶ್ ನನ್ನು ಹಿಡಿಯಲು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್ಐ ಹೊನ್ನಪ್ಪನವರ ಪಿಸ್ತೂಲ್ ಹೊರ ತೆಗೆದಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿ ವಿಜಯಪುರ ನಗರದ ಗೋಲಗುಂಬಜ್ ಪೊಲೀಸ್ ಠಾಣೆಗೆ ಕರೆದೊಯ್ದು ಹುಬ್ಬಳ್ಳಿ ಪೊಲೀಸರು ತಮ್ಮ ಹೆಸರು ವಿಳಾಸ ಹಾಗೂ ಇತರೆ ಮಾಹಿತಿ ನೀಡಿ ಬಳಿಕ ಆರೋಪಿ ಅವಿನಾಶನನ್ನು ಹುಬ್ಬಳ್ಳಿಗೆ ಕರೆಯ್ದೊಯ್ದಿದ್ದಾರೆ.ವಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನಿನ್ನೆ ಅಂಬೇಡ್ಕರ್ ವೃತ್ತದ ಬಳಿ ನಡೆದ ಸಿನೀಮಿಯ ಮಾದರಿಯ ಬಂಧನದ ಘಟನೆಯಿಂದ ಕೆಲ ಕಾಲ ಜನರಲ್ಲಿ ಮೂಡಿದ್ದ ಅತಂಕ ಮನೆ ಮಾಡಿತ್ತು.