Bailahongala

ಸಾರಾಯಿ ನಶೆಯಲ್ಲಿ ಮಗನಿಂದ ತಾಯಿ ಕೊಲೆ

Share

ಕುಡಿತದ ಆಮಲಿನಲ್ಲಿ ಮಗ ತಾಯಿಯನ್ನು ಕೊಲೆ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಮಹಾದೇವಿ ಗುರಪ್ಪ ತೊಲಗಿ(70) ಎಂದು ಗುರುತಿಸಲಾಗಿದೆ. 34 ವರ್ಷದ ಈರಣ್ಣ ಗುರಪ್ಪ ತೊಲಗಿ ಕೊಂದ ಆರೋಪಿ.
ಹೊಲ ತನ್ನ ಹೆಸರಿನಲ್ಲಿ ಮಾಡು ಹಾಗೂ ಹಣಕ್ಕಾಗಿ ಪೀಡಿಸುತ್ತ ಕಟ್ಟಿಗೆಯಿಂದ ಬಡಿದು ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಡಿ ವೈ ಎಸ್ ಪಿ ರವಿ ನಾಯ್ಕ, ಪಿ ಎಸ್ ಐ ನಂದೀಶ, ಪ್ರವೀಣ ಕೋಟಿ ಭೇಟಿ ನೀಡಿ ಆರೋಪಿಯನ್ನು ಬಂಧಿಸಿದ್ದಾರೆ. ದೊಡವಾಡ ಠಾಣೆಯಲ್ಲಿ ದೂರು ದಾಖಲಾಗಿದೆ

Tags:

error: Content is protected !!