ಬೈಲಹೊಂಗಲ ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪಿಗಳನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ .
ಬೈಲಹೊಂಗಲ ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಸವದತ್ತಿ ತಾಲೂಕಿನ ಬೆನಕಟ್ಟಿ ಗ್ರಾಮದ ಕಾಡಪ್ಪ ರುದ್ರಪ್ಪ ಶಿರಸಂಗಿ(42) ಕೊಲೆಯಾದ ವ್ಯಕ್ತಿ. ಮಬನೂರ ಗ್ರಾಮದ ಲಕ್ಷ್ಮಣ ದೇವೇಂದ್ರಪ್ಪ ಹೂಲಿ(21), ಜೀವಾಪುರ ಗ್ರಾಮದ ಸತೀಶ ಯಮನಪ್ಪ ಅರಿಬೆಚ್ಚಿ(28) ಬಂಧಿತ ಆರೋಪಿಗಳು. ಈ ಕುರಿತು ಮುರಗೋಡ ಪೊಲೀಸರು ತನಿಖೆ ನಡೆಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

