ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಣಮಾಪುರ ಗ್ರಾಮದಲ್ಲಿ ತಮ್ಮನ ಚಿಕಿತ್ಸೆಗಾಗಿ ಓದಿನೊಂದಿಗೆ ಕೆಲಸ ಮಾಡಿ ಬದುಕಿನ ಬಂಡಿ ಸಾಗಿಸುತ್ತಿದ್ದ ಕಿಶೋರಿಯ ಸಹಾಯಕ್ಕೆ ಅಧಿಕಾರಿಗಳು ಧಾವಿಸಿದ್ದಾರೆ. ಇಲ್ಲಿದೆ ಇನ್ ನ್ಯೂಸನ ಫಲಶ್ರುತಿ

ಓದಿ ಪೊಲೀಸ್ ಆಗೋ ಕನಸು ಕಂಡ ಕಿಶೋರಿಯ ಸಾಧನೆಗೆ ಅಡ್ಡಿಯಾಗಿದ್ದು ಬಡತನ ಹಾಗೂ ಕುಟುಂಬ ನಿರ್ವಹಣೆಯ ಹೊರೆ. ಆತ ಸದ್ರಡನಾಗಿದ್ದರು ಅಂದ ಮಡದಿ, ವಿಶೇಷ ಚೇತನ ಮಕ್ಕಳ ಜೊತೆ ಕಾಲದುಡುತ್ತಿದ್ದ ಆದರೆ ಕೊನೆ ಮಗನಿಗೆ ಹುಟ್ಟುತ್ತಲೆ ಕಿಡ್ನಿ ಸಮಸ್ಯೆ ಎದುರಾಗಿತ್ತು ಆತನ ಉಪಚಾರಕ್ಕೆ ಸಾಲದ ಹೊರೆ ಕುಟುಂಬವನ್ನ ಸಾಗಿಸಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತಾಗ ಒಂಬತ್ತನೆ ತರಗತಿಯಲ್ಲಿ ಓದುತ್ತಿದ್ದ ತನ್ನ ಹಿರಿಯ ಮಗಳು ಶುಭಾಂಗಿ ವಾರದಲ್ಲಿ ಎರಡು ದಿನ ಶಾಲೆ ಇನ್ನುಳಿದ ದಿನ ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಳು.
ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಇನ್ ನ್ಯೂಸ್ ತಂಡ “ಓದಿ ಪೊಲೀಸ್ ಆಗೋ ಅಸೆ ಆದ್ರೆ;ಕುಟುಂಬದ ಕಷ್ಟಕ್ಕೆ ಕಮರಿದ ಬದುಕು”ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿಯನ್ನ ಬಿತ್ತರಿಸಿತ್ತು ಸುದ್ದಿ ಬೆನ್ನಲ್ಲೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಬಡ ಕುಟುಂಬದ ಸಮಸ್ಯೆಗೆ ಸ್ಪಂದಿಸಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮನ ಉಪಚಾರ ಹಾಗೂ ಸರ್ಕಾರದ ಮಟ್ಟದಲ್ಲಿ ಶುಭಾಂಗಿಗೆ ಉತ್ತಮ ಶಿಕ್ಷಣ ಹಾಗೂ ಕುಟುಂಬಕ್ಕೆ ಸರ್ಕಾರದ ಸವಲತ್ತುಗಳನ್ನ ನೀಡುವ ಭರವಸೆ ನೀಡಿದ್ದಾರೆ.