karnataka

ಕೂಡಲ ಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆಗೆ ನನ್ನ ಅಭ್ಯಂತರವಿಲ್ಲ – ಬಿ.ವೈ.ವಿಜಯೇಂದ್ರ

Share

ರಮೇಶ್ ಜಾರಕಿಹೊಳಿ ,ಶಾಸಕ ಯತ್ನಾಳ ಪಾದಯಾತ್ರೆಗೆ ತಮ್ಮಿಂದ ಯಾವುದೇ ಅಭ್ಯಂತರ ಇಲ್ಲ ಪಾದಯಾತ್ರೆಯಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ಅವರೂ ಪಾದಯಾತ್ರೆ ಮಾಡರೆ ಪಕ್ಷಕ್ಕೆ ಪೂರಕವಾಗಿರಬೇಕು. ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ .
ವಾ.ಓ : ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ ಕೂಡಲಸಂಗಮ ದಿಂದ ಬಳ್ಳಾರಿವರೆಗೆ ಪಾದಯಾತ್ರೆಗೆ ನನ್ನ ಅಭ್ಯಂತರವಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ. ಯಾವುದೇ ಚಟುವಟಿಕೆಗಳು ಪಕ್ಷಕ್ಕೆ ಪೂರಕ, ಸಂಘಟನೆಗೆ ಇನ್ನಷ್ಟು ಶಕ್ತಿ ತುಂಬಬೇಕು. ಕೇಂದ್ರದ ನಾಯಕತ್ವ ಅನುಮತಿ ನೀಡಿದರೆ ಪಾದಯಾತ್ರೆ ಆಯೋಜಿಸಲಿ ಎಂದು ಹೇಳಿದ್ದರು .

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ, ಹೊಂದಾಣಿಕೆ ವರಿಷ್ಠರ ವಿವೇಚನೆಗೆ ಬಿಟ್ಟದ್ದು. ಈ ಕ್ಷೇತ್ರವನ್ನು ಹಿಂದೆ ಪ್ರತಿನಿಧಿಸಿದ್ದ ಸಿ.ಪಿ.ಯೋಗೇಶ್ವರ್ ತಮ್ಮದೇ ಆದ ಹಿಡಿತ, ಶಕ್ತಿ ಹೊಂದಿದ್ದಾರೆ. ಆದರೆ ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಆಯ್ಕೆಯಾದ ಕ್ಷೇತ್ರ ಎನ್ನುವುದು ಮರೆಯಬಾರದು ಎಂದರು.

ಜನೌಷಧಿ ಕೇಂದ್ರಗಳ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಔಷಧಿ, ಮಾತ್ರೆ ಸಿಗುತ್ತವೆ. ಸಾಕಷ್ಟು ಜನರು ಪ್ರಯೋಜನ ಪಡೆದು, ಪ್ರಧಾನಿ ನರೇಂದ್ರ ಮೋದಿಯವರ ಈ ಉಪಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಏನೋ ಒಂದು ಕಾರಣ ಹೇಳಿ ಜನೌಷಧಿ ಕೇಂದ್ರಗಳನ್ನು ಬಡವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದರು.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕು. ಕಳೆದ ಬಾರಿ ಬರದಿಂದ ನಷ್ಟ ಅನುಭವಿಸಿದ ರೈತರು, ಈ ಬಾರಿ ಮಾನವ ನಿರ್ಮಿತ ತಪ್ಪಿನಿಂದ ನಾಲ್ಕು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಬೆಳೆಯೂ ಸಿಗುವುದಿಲ್ಲವೆಂದು ಕಂಗಾಲಾಗಿದ್ದಾರೆ. ಪ್ರತಿ ಹೆಕ್ಟೇರ್ ಗೆ 50 ಸಾವಿರ ರೂ ಪರಿಹಾರ ಘೋಷಿಸಿ ಸರ್ಕಾರವೇ ಈ ನಷ್ಟ ತುಂಬಿ ಕೊಡಬೇಕು ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ತುಂಗಭದ್ರಾ ಯೋಜನೆಯ ಕೇಂದ್ರ ವಲಯಕ್ಕೆ ಒಂದು ವರ್ಷದಿಂದ ಮುಖ್ಯ ಇಂಜಿನಿಯರ್ ನೇಮಕವಾಗಿಲ್ಲ. ಸರಿಯಾಗಿ ನಿರ್ವಹಣೆಯಾಗಿಲ್ಲ. ಈ ಲೋಪ ಸರಿಪಡಿಸಿಕೊಳ್ಳಲು ಸಲಹೆ ನೀಡಿದರೆ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎನ್ನುತ್ತಿದ್ದಾರೆ.

ತುಂಗಭದ್ರಾ ಮಂಡಳಿ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಈ ಅವಘಡಕ್ಕೆ ಕೇಂದ್ರವೇ ಹೊಣೆ ಎಂದು ಪ್ರತ್ಯಾರೋಪ ಮಾಡುತ್ತಿದ್ದಾರೆ. ಅಣೆಕಟ್ಟೆಯ 17 ರಿಂದ 33 ಕ್ರಸ್ಟ್ ಗೇಟ್ ಗಳ ನಿರ್ವಹಣೆ ರಾಜ್ಯ ಸರ್ಕಾರದ್ದಾಗಿದೆ. ಕೇಂದ್ರ ಅಧೀನದ ತುಂಗಭದ್ರಾ ಮಂಡಳಿ ಸುರಕ್ಷತೆಗೆ ಕೈಗೊಳ್ಳಬೇಕಾದ ಸುರಕ್ಷತೆ ಬಗ್ಗೆ ಮಾಡಿದ ಶಿಫಾರಸುಗಳನ್ನು ನಿರ್ಲಕ್ಷಿಸಿದವರು ಯಾರು ? ಎಂದು ಮರು ಪ್ರಶ್ನಿಸಿದರು.
ಜಲ ಸಂಪನ್ಮೂಲ ಖಾತೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ಬಿಟ್ಟು ಇಲಾಖೆ ಬಗ್ಗೆ ಆಸಕ್ತಿಯೇ ಇಲ್ಲ. ಒಂದೂವರೆ ವರ್ಷ ಕಳೆದರೂ ಇಲಾಖೆ ಪ್ರಗತಿ ಪರಿಶೀಲನೆಯೇ ಮಾಡಿಲ್ಲ. ಬೇರೆ ಸಂಪನ್ಮೂಲದ ಬಗ್ಗೆ ಹೆಚ್ಚಿನ ಕಾಳಜಿಯಿದೆ. ಅತ್ಯಮೂಲ್ಯ ಸಂಪನ್ಮೂಲ ಎನ್ನುವುದನ್ನು ಕಡಗಣಿಸಿದ್ದಾರೆ.ಎಂದು ವಾಗ್ದಾಳಿ ನಡೆಸಿದ್ದರು .

ಅಣೆಕಟ್ಟೆ ಕ್ರಸ್ಟ್ ಗೇಟ್ ಕಿತ್ತು ಹೋಗಿದ್ದರಿಂದ 65 ಟಿಎಂಸಿ ಅಡಿ ನೀರು ವ್ಯರ್ಥವಾಗುತ್ತಿದೆ. ಭರಪೂರ ಮಳೆಯಿಂದ ಸಂತಸದಲ್ಲಿ ರೈತರು ಚಿಂತೆಗೀಡಾಗಿದ್ದಾರೆ. ರಾಜ್ಯದ ಶೇಕಡ 40ರಷ್ಟು ಭತ್ತ ಉತ್ಪಾದನೆ ಇದೇ ಅಚ್ಚುಕಟ್ಟು ಪ್ರದೇಶದಿಂದ ಆಗುತ್ತಿದ್ದು, ಅದೀಗ ಕೈಬಿಟ್ಟು ಹೋಗುತ್ತಿದೆ ಎಂದು ವಿಜಯೇಂದ್ರ ಕಳವಳ ವ್ಯಕ್ತಪಡಿಸಿದರು.

Tags:

error: Content is protected !!