MAHARASHTRA

ಬಿಜೆಪಿ ಟಿಕೆಟ್ ಗೆ ಬೇಡಿಕೆ – ಮಹಾರಾಷ್ಟ್ರ ಡಿಸಿಎಂಗೆ ಕನ್ನಡದಲ್ಲಿ ರಕ್ತಪತ್ರ

Share

ಜತ್ತ ತಾಲೂಕಿನ ಬೀಳ್ಳೂರ ಗ್ರಾಮದ ಯುವಕ ಪೀರು ಕೋಳಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗೆ ರಕ್ತದಲ್ಲಿ ಕನ್ನಡ ಭಾಷೆಯಲ್ಲಿ ಪತ್ರ ಬರೆಯುವ ಮೂಲಕ ಕನ್ನಡದ ಪ್ರೇಮ ಮೆರೆದಿದ್ದಾನೆ .

ಮಹಾರಾಷ್ಟ್ರದ ಡಿಸಿಎಂ, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ದೇವೇಂದ್ರ ಪಡ್ನವಿಸ್ ಗೆ ಪೀರು ಕೋಳಿ ರಕ್ತದಲ್ಲಿ ಮನವಿ ಪತ್ರ ಬರೆದಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ನೆಚ್ಚಿನ ನಾಯಕ ತಮ್ಮನಗೌಡ ರವಿ ಪಾಟೀಲ್ ಗೆ ಬಿಜೆಪಿ ಟಿಕೆಟ್ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾನೆ.

ಜತ್ತ ವಿಧಾನಸಭಾ ಕ್ಷೇತ್ರಕ್ಕೆ ತಮ್ಮನಗೌಡ ರವಿ ಪಾಟೀಲ್ ಗೆ ಬಿಜೆಪಿ ಪಕ್ಷದ ಟಿಕೆಟ್ ನೀಡುವಂತೆ ಪತ್ರದಲ್ಲಿ ಪೀರು ಕೋಳಿ ಬರೆದಿದ್ದಾನೆ. ಈತ ತಮ್ಮನಗೌಡ ರವಿ ಪಾಟೀಲ್ ದೊಡ್ಡ ಅಭಿಮಾನಿ ಆಗಿದ್ದಾನೆ

Tags:

error: Content is protected !!